Home Important BJP ಗೆ ಸವಾಲೆಸೆದು, ಅಮಿತ್‌ ಶಾ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ CM

BJP ಗೆ ಸವಾಲೆಸೆದು, ಅಮಿತ್‌ ಶಾ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ CM

SHARE

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಅವನು ಯಾರು…ಅಮಿತ್‌ ಶಾ ಸುಳ್ಳು ಹೇಳ್ಕೊಂಡು ಊರೆಲ್ಲಾ ತಿರುಗಾಡಿದ್ರೆ ನಾನೇನ್‌ ಮಾಡಕ್ಕಾಗುತ್ತೆ ಎಂದು ಏಕವಚನದಲ್ಲೇ ಮಾತನಾಡಿದ್ದಾರೆ.

ಸುಳ್ಳು ಹೇಳೋದು, ಟೀಕೆ ಮಾಡೋದು ಬಿಜೆಪಿಯವರ ಚಾಳಿ. ಅದೇ ಕೆಲಸವನ್ನು ಅಮಿತ್ ಶಾ ಮಾಡುತ್ತಿದ್ದಾರೆ. ಎಷ್ಟೇ ಸುಳ್ಳು ಹೇಳಿದರೂ ಜನ ನಂಬುವುದಿಲ್ಲ ಎಂದಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು ನಮಗೆ ಚಾಲೆಂಜ್‌ ಮಾಡಲಿ ನೋಡೋಣ. ರಾಜ್ಯದ ಜನತೆ ನಮ್ಮ ಪರವಾಗಿದ್ದಾರೆ. ಅವರ ನಿರ್ಧಾರವೇ ಅಂತಿಮ. ಗೆಲ್ಲುವುದು ಯಾರು ಎಂದು ನೋಡೋಣ. ಸಾಧ್ಯವಾದರೆ ಬಿಜೆಪಿ ನಮ್ಮ ವಿರುದ್ಧ ಚಾಲೆಂಜ್‌ ಮಾಡಲಿ ಎಂದು ಸವಾಲು ಹಾಕಿದ್ದಾರೆ.