Home Local ಗೋಕರ್ಣದಲ್ಲಿ ಪ್ರಾರಂಭಗೊಂಡಿದೆ ಶಿವರಾತ್ರಿ ಮಹೋತ್ಸವ

ಗೋಕರ್ಣದಲ್ಲಿ ಪ್ರಾರಂಭಗೊಂಡಿದೆ ಶಿವರಾತ್ರಿ ಮಹೋತ್ಸವ

SHARE

ಗೋಕರ್ಣ: ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಹೇಮಲ೦ಬ ಸಂವತ್ಸರದ ಶಿವರಾತ್ರಿ ಮಹೋತ್ಸವವು ಇಂದು ಗಣೇಶ ಪೂಜೆ , ನಂದಿ ಧ್ವಜಾರೋಹಣ ಮೂಲಕ ಪ್ರಾರಂಭಗೊಂಡಿತು .

ಮುಖ್ಯ ಅರ್ಚಕರಾದ ವೇ . ಮೂ . ಶಿತಿಕಂಠ ಹಿರೇ ಭಟ್ಟ ಇವರ ನೇತೃತ್ವದಲ್ಲಿ ವೇ ಕೃಷ್ಣ ಭಟ್ ಷಡಕ್ಷರಿ ತಾಂತ್ರಿಕತೆಯಲ್ಲಿ ಜಗತ್ರ್ಪಸಿದ್ಧ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಉಪಾಧಿವಂತ ಮಂಡಲದ ಸದಸ್ಯರು , ಊರ ನಾಗರೀಕರು ಹಾಜರಿದ್ದರು.