Home Local ಡಿ ಐ ಡಿ ಖ್ಯಾತಿಯ ಸಂಕೇತ್ ಗಾಂವಕರ್ ಗೆ ರಾಷ್ಟ್ರಧ್ವಜ ನೀಡಿ ಗೌರವಿಸಿದ ರೂಪಾಲಿ ನಾಯ್ಕ.

ಡಿ ಐ ಡಿ ಖ್ಯಾತಿಯ ಸಂಕೇತ್ ಗಾಂವಕರ್ ಗೆ ರಾಷ್ಟ್ರಧ್ವಜ ನೀಡಿ ಗೌರವಿಸಿದ ರೂಪಾಲಿ ನಾಯ್ಕ.

SHARE

ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವವನದಲ್ಲಿ ನಡೆದ ಡಿ ಐ ಡಿ ಖ್ಯಾತಿಯ ಸಂಕೇತ್ ಗಾಂವಕರ್ ಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಹಾಗೂ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿಯಾದ ಶ್ರೀಮತಿ ರೂಪಾಲಿ ನಾಯ್ಕ ನಮ್ಮ ರಾಷ್ಟ್ರಧ್ವಜ ನೀಡುವ ಮೂಲಕ ವಿಶಿಷ್ಠವಾಗಿ ಸನ್ಮಾನಿಸಿದರು.

ನಂತರ ಮಾತನಾಡಿದ ಅವರು ಸಂಕೇತ ಗಾಂವಕರ್ ಕೇವಲ ಅಂಕೋಲಾ‌ ಕ್ಕೆ ಅಷ್ಟೆ ಅಲ್ಲದೆ ಇಡೀ ನಮ್ಮ ಕರುನಾಡಿನ ಹೆಮ್ಮೆ ಎಂದರು.ನಮ್ಮ ನಾಡು ಜಿಲ್ಲೆ ಊರಿನ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿರುವ ಸಂಕೇತನಿಗೆ ಕೋಟಿ ಕೋಟಿ ನಮನ ಎಂದರು.ಈತನ ಪರಿಶ್ರಮದ ಜೊತೆಗೆ ಇವನ ತಂದೆ ತಾಯಿಯರ ಪರಿಶ್ರಮ ದೊಡ್ಡದು ಆದ್ದರಿಂದ ಪ್ರತಿಯೊಬ್ಬ ತಂದೆ ತಾಯಂದಿರಲ್ಲಿ ನಾನು ಕೇಳಿಕೊಳ್ಳೋದು ಇಷ್ಟೆ ದಯವಿಟ್ಟು ನಿಮ್ಮ ಮಕ್ಕಳ ಆಸಕ್ತಿ ಯಾವ ಕಡೆಗೆ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಶಿಕ್ಷಣ ನೀಡಿ ಎಂದರು.ದಯವಿಟ್ಟು ಎಲ್ಲರೂ ಸಂಕೇತ ಗಾಂವಕರ್ ಗೆ ಓಟ್ ಮಾಡಿ ಅವನು ಗೆದ್ದು ಬರಲಿ ಎಂದು ದೇವರಲ್ಲಿ ಕೇಳಿಕೊಳ್ಳೋಣ ಎಂದರು.