Home Local ಗೋಕರ್ಣ ಶಿವರಾತ್ರಿ – ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

ಗೋಕರ್ಣ ಶಿವರಾತ್ರಿ – ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

SHARE

ಗೋಕರ್ಣ: ಶಿವರಾತ್ರಿ ಮಹೋತ್ಸವ ಪ್ರಯುಕ್ತ ದಿನಾಂಕ 09-01-2018 ಸಾಯಂಕಾಲ 06.00 ಘಂಟೆಗೆ ಸಮುದ್ರ ತೀರದ ‘ಮಹರ್ಷಿ ದೈವರಾತ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿತು .

ರಾಜ್ಯ ಸಂಗೀತ ಅಕಾಡೆಮಿ ಸದಸ್ಯರು, ಖ್ಯಾತ ಗಾಯಕರೂ ಆದ ಡಾ ಅಶೋಕ ಹುಗ್ಗಣ್ಣವರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು .

ಶಿವರಾತ್ರಿ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಡಾ ವಿ ಆರ್ ಮಲ್ಲನ್ , ಸದಸ್ಯರಾದ ಶ್ರೀ ಮಹೇಶ ಶೆಟ್ಟಿ, ಶ್ರೀ ನಾಗರಾಜ ಹಿತ್ಲಮಕ್ಕಿ, ಶ್ರೀ ಬೀರಣ್ಣ ನಾಯಕ ಅಡಿಗೋಣ , ಶ್ರೀ ಜಯರಾಮ ಹೆಗಡೆ , ಡಾ ಶೀಲಾ ಹೊಸ್ಮನೆ , ದೇವಾಲಯದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಇವರು ಉಪಸ್ಥಿತರಿದ್ದರು .