Home Local ಜೀವನಕ್ಕೆ ಬೇಕಾದ ಎಲ್ಲವನ್ನು ಕೊಡುವ ಅರಣ್ಯ ಅವಲಂಬನೆಗೆ ಮಿತಿಯಿರಬೇಕು : ವಿನಯ ಭಟ್ಟ

ಜೀವನಕ್ಕೆ ಬೇಕಾದ ಎಲ್ಲವನ್ನು ಕೊಡುವ ಅರಣ್ಯ ಅವಲಂಬನೆಗೆ ಮಿತಿಯಿರಬೇಕು : ವಿನಯ ಭಟ್ಟ

SHARE

ಶಿರಸಿ: ನಮ್ಮ ಜೀವನಕ್ಕೆ ಬೇಕಾದ ಎಲ್ಲವನ್ನು ಕೊಡುವದು ಈ ಪ್ರಕೃತಿ., ಉರುವಲು, ಕಾಡಿನ ಉಪಉತ್ಪನ್ನ, ನೀರು ನಮಗೆ ಅವಶ್ಯಕತೆಗಳಿಗಿಂತ ಹೆಚ್ಚು ಬಳಕೆ ನಿಲ್ಲಬೇಕು. ಅರಣ್ಯ ಅವಲಂಬನೆಗೆ ಮಿತಿಯಿರಬೇಕೆಂದು ಬನವಾಸಿ ವಲಯಾರಣ್ಯಾಧಿಕಾರಿ ವಿನಯ ಭಟ್ಟ ಹೇಳಿದರು.

ಅವರು ಅರಣ್ಯ ಇಲಾಖೆ,ಯೂತ್ ಫಾರ್ ಸೇವಾ ಉತ್ತರಕನ್ನಢ,ಶ್ರೀ ಬಸವೇಶ್ವರ ಪ್ರೌಢಶಾಲೆ ಅಂಡಗಿ ಸಂಯುಕ್ತಾಶ್ರಯದಲ್ಲಿ ನಡೆದ ಬೆಂಕಿಯಿಂದ ಅರಣ್ಯ ರಕ್ಷಿಸಿ ಜಾಗೃತಿ ಜಾಥಾದಲ್ಲಿ ಮಾತನಾಡುತ್ತಾ ಮರ ಕಡಿಯುವದು, ಬೆಂಕಿ ಹಚ್ಚುವದು, ಪ್ರಾಣಿಗಳ ಬೇಟೆ,ನದಿಗಳ ನೀರನ್ನು ಅತಿಯಾಗಿ ಉಪಯೋಗಿಸವದು ಇದು ಅಪರಾಧ. ಇದರಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮ ಮುಂದಿನ ಪೀಳಿಗೆಗೆ ಆದ್ದರಿಂದ ಇಂದು ಮಕ್ಕಳಲ್ಲಿ ಇದರ ಕುರಿತು ಜಾಗೃತಿ ಮಾಡಬೇಕಾಗಿದೆ ಎಂದರು.ಕಾಡಿನಿಂದಲೆ ಎಲ್ಲವನ್ನೂ ಪಡೆಯುವ ನಾವು ಕಾಡಿನ ರಕ್ಷಣೆ ನಮ್ಮ ಜವಾಬ್ದಾರಿ ಮತ್ತು ನಮ್ಮ ಹೊಣೆ ಕರ್ತವ್ಯ ಎಂದು ಹೇಳಿದರು.

ಪ್ರಕೃತಿಯೇ ನಮ್ಮ ತಾಯಿ ನಾವು ಅದರ ಮಕ್ಕಳು ಎಂದು ಋಗ್ವೇದದಲ್ಲಿ ಹೇಳುವಂತೆ ಪ್ರಕೃತಿಯಿಲ್ಲದೇ ನಮ್ಮ ಜೀವನವಿಲ್ಲ . ನಾವು ನಮ್ಮ ಜೀವನದಲ್ಲಿ ದೇವರ ಅರ್ಚನೆಗಾಗಿ, ಹಬ್ಬ ಹರಿದಿನಗಳ ಬೇರೆ ಬೇರೆ ಅಲಂಕಾರಕ್ಕಾಗಿ, ದಿನಿ ನಿತ್ಯದ ಆಹಾರಕ್ಕಾಗಿ, ಅನಾರೋಗ್ಯ ಬಂದಾಗ ಔಷಧಕ್ಕಾಗಿ, ಯಜ್ಞ ಹೋಮಗಳಿಗಾಗಿ ಅನುಕಾಲವೂ ಅರಣ್ಯವನ್ನು ಅವಲಂಬಿಸುತ್ತೇವೆ. ಆದರೆ ಅದರ ರಕ್ಷಣೆ , ಸಂರಕ್ಷಣೆ ನಮ್ಮದೆಂಬ ಭಾವನೆ ಬೆಳೆಸ ಬೇಕು ಎಂದು ಯೂತ್ ಫಾರ್ ಸೇವಾದ ರಾಜ್ಯ ಸಂಚಾಲಕ ಉಮಾಪತಿ ಭಟ್ಟ ಹೇಳಿದರು.
ಇಂಗ್ಲಿಷ ವರ್ಣಮಾಲೆಯ “ಎಫ್” 5 ನಮಗೆ ಅರಣ್ಯ ನೀಡುವ ಎಲ್ಲ ಸೌಲಭ್ಯವನ್ನು ವಿವರಿಸುತ್ತದೆ.ಪ್ರುಟ್,(ಹಣ್ಣು) ಫರ್ಟಿಲಿಟಿ(ಫಲವತ್ತತೆ) ಫೈಬರ್(ನಾರು) ಫುಯೆಲ್( ಉರುವಲು)ಫರ್ಟಿಲೈಸರ್( ಗೊಬ್ಬರ)ಇದು ಮಕ್ಕಳಿಗೆ ತಿಳಿಯಬೇಕು. ಅದನ್ನು ಬೆಳೆಸುವ ಪ್ರಯತ್ನ ನಮ್ಮಿಂದ ಆಗಬೆಕು ಎಂದರು.

ಭವಿಷ್ಯದ ದೃಷ್ಟಿಯಿಂದ ಮಕ್ಕಳಲ್ಲಿ ಅರಣ್ಯ ಅರಿವು ಮೂಡಿಸಬೇಕು ವನ್ಯ ಪ್ರಾಣಿಗಳನ್ನು , ಕಾಡನ್ನು ಸಂರಕ್ಷಿಸುವ ವಿಧಾನವನ್ನು ಇಂದು ಕಲಿಸಬೇಕಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಅರಣ್ಯ ರಕ್ಷಕ ಪಿ.ಎಂ.ಗುಡ್ಡಪ್ಪ ಹೇಳಿದರು. ವನ್ಯ ಪ್ರಾಣಿಗಳು, ಪಕ್ಷಿಗಳು ರೈತನ ಮಿತ್ರವಾಗಿವೆ,ಅರಣ್ಯ ಉಳಿದರೆ ಮಾತ್ರ ಮಳೆ ಬೆಳೆ ಸರಿಯಾಗಿ ಆಗುವದು. ನಿರಂತರ ಅರಣ್ಯ ನಾಶದಿಂದ ಜಾಗತಿಕ ತಾಪಮಾನ ಏರಿಕೆಯಂತಹ ಅನೇಕ ದುಷ್ಪರಿಣಾಮವನ್ನು ನಾವು ಇಂದು ಅನುಭವಿಸುತ್ತಿದ್ದೇವೆ . ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದು ಜನರಲ್ಲಿ ಜಾಗೃತಿ ಮೂಡಿಸಬೆಕಾಗಿದೆ ಎಂದರು.

ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯ ಸಿ.ಬಿ ಗೌಡ ಅಧ್ಯಕ್ಷತೆವಹಿಸಿದ್ದರು. ಬನವಾಸಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಗ್ರಾಮಸ್ಥರು, ಶಿರಸಿಯ ಸರಕಾರಿ ಪ್ರಥಮ ದರ್ಜೇ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಚೇತನ ನಾಯ್ಕ ಮತ್ತು ಇತರ ಸದಸ್ಯರು , ಉಪವಲಯ ಅರಣ್ಯ ಅಧಿಕಾರಿ ಶ್ರೀಧರ ನಾಯ್ಕ,ರಮೇಶಎಚ್.ಸಿ, ಮಂಜುನಾಥ ಶಿಗ್ಲಿ ಜಾಥಾದಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಬೆಂಕಿಯಿಂದ ಅರಣ್ಯ ರಕ್ಷಣೆ ಕುರಿತು ಫೈರ್ ಲೈನ್ ಮಾಡುವ ಪ್ರಾತ್ಯಕ್ಷಿಕೆ ಮಾಡಲಾಯಿತು.