Home Information ನಾಳೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ: ಸಹಕರಿಸಲು ಮನವಿ

ನಾಳೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ: ಸಹಕರಿಸಲು ಮನವಿ

SHARE

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಶ್ರೀಮಾರಿಕಾಂಬಾ ಜಾತ್ರೆ ನಿಮಿತ್ತ ಹಳೆಯ ತಂತಿಯನ್ನು (ವಾಹಕ) ಬದಲಾಯಿಸುವ ಕಾಮಗಾರಿಯನ್ನು ದಿನಾಂಕ: 11ರಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 5 ಘಂಟೆ ವರೆಗೆ ಕೋಣನಬಿಡ್ಕಿ, ಮುಸ್ಲಿ0ಗಲ್ಲಿ, ಖಾಜಿಗಲ್ಲಿ, ವೀರಭದ್ರಗಲ್ಲಿ, ಕುಂಬಾರ ಓಣಿ, ನಟರಾಜ ರಸ್ತೆ, ರಾಯರಪೇಟೆ ಮತ್ತು ಕೋಟೆಗಲ್ಲಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು.

ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಕಾರ್ಯ ಮತ್ತು ಪಾಲನಾ ಉಪ ವಿಭಾಗ ಹೆಸ್ಕಾಂ ಶಿರಸಿ ತಿಳಿಸಿದೆ