Home Local ಜಿಲ್ಲಾ ಯುವ ಸಾಂಘಿಕ ಪ್ರಶಸ್ತಿಗೆ ಶಿರಸಿಯ ದಾಕ್ಷಾಯಣಿ ಯುವತಿ ಮಂಡಳ ಆಯ್ಕೆ: ಸಂದಿತು ಗೌರವ

ಜಿಲ್ಲಾ ಯುವ ಸಾಂಘಿಕ ಪ್ರಶಸ್ತಿಗೆ ಶಿರಸಿಯ ದಾಕ್ಷಾಯಣಿ ಯುವತಿ ಮಂಡಳ ಆಯ್ಕೆ: ಸಂದಿತು ಗೌರವ

SHARE

ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕೊಡಮಾಡಲ್ಪಡುವ ಜಿಲ್ಲಾ ಯುವ ಸಾಂಘಿಕ ಪ್ರಶಸ್ತಿಗೆ ಶಿರಸಿಯ ದಾಕ್ಷಾಯಣಿ ಯುವತಿ ಮಂಡಳ ಆಯ್ಕೆಯಾಗಿದ್ದು, ತಾಲ್ಲೂಕು ಪಂಚಾಯತಿ ಸಭಾಭವನದಲ್ಲಿ ನಡೆದ ಜಿಲ್ಲಾ ಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಡಳದ ಅಧ್ಯಕ್ಷೆಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಕಾರವಾರದ ಬಿಣಗಾ ಸಿದ್ಧರಾಮೇಶ್ವರ ಯುವಕ ಸಂಘದ ನಾಗರಾಜ ಗೌಡ, ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ದಿಲೀಪ್ ಕೊಠಾರಕರ್, ಆಝಾದ್ ಯೂಥ್ ಕ್ಲಬ್‌ನ ಮೊಹ್ಮದ್ ಉಸ್ಮಾನ್ ಶೇಖ್, ಭಟ್ಕಳದ ಫ್ರೆಂಡ್ಸ್ ಯೂಥ್‌ ಕ್ಲಬ್‌ನ ರಾಜೇಶ ನಾಯ್ಕ, ಜೊಯಿಡಾದ ಸಹ್ಯಾದ್ರಿ ಯುವಕ ಸಂಘದ ಸಚಿನ್ ತಳೇಕರ್‌ಗೆ ಇದೇ ಸಂದರ್ಭದಲ್ಲಿ ವೈಯಕ್ತಿಕ ಪ್ರಶಸ್ತಿ ನೀಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಶಾಸಕ ಸತೀಶ್ ಸೈಲ್, ‘ರಾಷ್ಟ್ರದ ಏಳಿಗೆಗೆ ಯುವಕರೇ ಬುನಾದಿ. ತಪ್ಪು ದಾರಿ ತುಳಿಯದೆ ಸಮಾಜ ಗೌರವಿಸುವ ರೀತಿಯಲ್ಲಿ ಬದುಕಬೇಕು. ದೇಶದ ಅಭಿವೃದ್ಧಿಗೆ ಯುವಜನತೆ ಕೈಜೋಡಿಸಬೇಕು’ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕ್ರೀಡಾ ತರಬೇತುದಾರ ಪ್ರಕಾಶ ರೇವಣಕರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಚೈತ್ರಾ ಕೊಠಾರಕರ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಸದಸ್ಯರಾದ ಮಾರುತಿ ನಾಯ್ಕ, ನಂದಿನಿ ಗುನಗಿ ವೇದಿಕೆಯಲ್ಲಿದ್ದರು.