Home Local ಮಂಕಿಯಲ್ಲಿ ಚಿರಾಯು ಹೆಲ್ತಕೆರ ಉದ್ಘಾಟನೆ.

ಮಂಕಿಯಲ್ಲಿ ಚಿರಾಯು ಹೆಲ್ತಕೆರ ಉದ್ಘಾಟನೆ.

SHARE

ಹೊನ್ನಾವರ – ತಾಲೂಕಿನಲ್ಲೆಯೇ ಪ್ರಪ್ರಥಮಬಾರಿಗೆ ಮಂಕಿ ಆಸ್ಪತ್ರೆಯ ಮಹಾಲೆ ಕಾಂಪ್ಲೇಕ್ಸನಲ್ಲಿ ಡಾ ಮಂಜುನಾಥ ಮಾಲೀಕತ್ವದ ಚಿರಾಯು ಹೆಲ್ತಕೇರ್ ಹೋಮಿಯೋಪತಿ ಚಿಕಿತ್ಸಾಲಯ ಉದ್ಗಾಟನಾ ಸಮಾರಂಭ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಕ್ರಾಂತಿರಂಗದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕರವರು ಡಾ. ಮಂಜುನಾಥ ಹೊರರಾಜ್ಯದಲ್ಲಿ ಹೋಮಿಯೋಪತಿ ಶಿಕ್ಷಣ ಪಡೆದು ತಮ್ಮ ಹುಟ್ಟೂರಲ್ಲಿಯೇ ಜನರ ಸೇವೆಗೆ ಸಿದ್ದರಾಗಿದ್ದಾರೆ. ತಾಲೂಕಿನಲ್ಲಿಯೇ ಪ್ರಪಥಮವಾಗಿ ಮಂಕಿಯಂತಹ ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ತೆರೆದಿರುವುದು ಸಂಸತದ ಸಂಗತಿ. ಇವರಿಂದ ಇ ಭಾಗದ ಜನತೆಗೆ ಉತ್ತಮ ಸೌಲಭ್ಯ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.

ಡಾ. ಮಂಜುನಾಥ ನಾಯ್ಕರವರು ಮಾತನಾಡಿ ಹೋಮಿಯೋಪತಿ ವೈದ್ಯಕೀಯ ಸೇವೆ ಕೇವಲ ಪಟ್ಟಣ ಪ್ರದೇಶದಲ್ಲಿ ಮಾತ್ರ ಉತ್ತಮವಾಗಿ ಸೇವೆ ಸಲ್ಲಿಸಬಹುದು ಎಂಬ ತಪ್ಪು ಕಲ್ಪನೆಯಿದೆ. ಆದರೆ ಗ್ರಾಮೀಣ ಭಾಗದಲ್ಲೂ ಕೂಡ ಜನರಿಗೆ ಉತ್ತಮಸೇವೆ ನೆಡಸಬಹುದಾಗಿದೆ. ಹೋಮಿಯೋಪತಿಯಲ್ಲಿ ತುರ್ತು ಚಿಕಿತ್ಸೆಯೊಂದಿಗೆ ದೀರ್ಘಕಾಲದ ರೋಗಿಗಳಿಗೂ ಚಿಕಿತೆನೀಡಬಹುದಾಗಿದೆ. ಜಿಲ್ಲಾ ಕೇಂದ್ರದಲ್ಲಿ ಅಸ್ಪತ್ರೆ ತೆರೆಯಲು ತುಂಬಾ ಬೇಡಿಕೆ ಇತ್ತು. ಆದರೆ ಹುಟ್ಟುರಿಗೆ ಸೇವೆ ನೀಡಬೇಕೆಂಬುದು ತನ್ನ ಆಸೆ. ಆದರಿಂದ ಮಂಕಿ ಗ್ರಾಮದಲ್ಲಿಯೇ ಆರಂಭಿಸಿದ್ದೇನೆ ಎಂದರು.

ಇ ಸಂದರ್ಭದಲ್ಲಿ ಶ್ರೀಮತಿ ವಾಂಸಂತಿ ಪ್ರಭಾಕರ ನಾಯ್ಕ, ನಿವೃತ್ತ ಎಸ್ ಐ ನಯನಬಾಬು ಕಾಣಕೋಣಕರ,ಉದ್ಯಮಿ ವಿನೋದ ಮಹಾಲೆ, ಶ್ರಮತಿ ಉಪಸ್ಥಿತರಿದ್ದರು. ಡಾ.ರಂಗನಾಥ ಪೂಜಾರಿ, ಡಾ, ವಿನಾಯಕ ರಾಯ್ಕರ, ಡಾ ಸಭಾಹಿತ, ಡಾ ದಿನೇಶ ಆಚಾರ್ಯ, ಡಾ ಮನೋಜ, ಡಾ ಜೀವನ ಸಾಲಿಯನ್ ಮುಂತಾಧ ಗಣ್ಯರು ಆಗಮಿಸಿ ಡಾ ಮಂಜುನಾಥರವರಿಗೆ ಶುಭಕೋರಿದರು.