Home Local ಬಡವರಿಗೆ ಕಾಲಿನ ಆಧಾರವಾಯ್ತು ರೋಟರಿ ಸಂಸ್ಥೆ : ಯಶಸ್ವಿಯಾಯ್ತು ಶಿಬಿರ

ಬಡವರಿಗೆ ಕಾಲಿನ ಆಧಾರವಾಯ್ತು ರೋಟರಿ ಸಂಸ್ಥೆ : ಯಶಸ್ವಿಯಾಯ್ತು ಶಿಬಿರ

SHARE

ಕಾರವಾರ: ರೋಟರಿ ಕ್ಲಬ್ ಹಾಗೂ ಸಾಧು ವಾಸ್ವಾನಿ ಮಿಷನ್, ಪುಣೆ ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ ಜಿಲ್ಲಾ ರಂಗ ಮಂದಿರದಲ್ಲಿ ಹಮ್ಮಿಕೊಂಡ ಉಚಿತ ಕೃತಕ ಕೈ-ಕಾಲು ಜೋಡಣಾ ಅಳತೆಯ ಶಿಬಿರ ಯಶಸ್ವಿಯಾಗಿ ಪೂರ್ಣಗೊಂಡಿದ್ದು ನೂರಕ್ಕಿಂತ ಮಿಕ್ಕ ಆಕಾಂಕ್ಷಿಗಳು ಬಾಗವಹಿಸಿದ್ದು 97 ಅರ್ಹ ಫಲಾನುಭವಿಗಳನ್ನು ಜೋಡಣೆಗೆ ಆಯ್ಕೆ ಮಾಡಲಾಯಿತು.

ಶಿಬಿರವನ್ನು ದೀಪಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ರಾಮಕೃಷ್ಣ ಆಶ್ರಮದ ಮಹಂತರಾದ ಸ್ವಾಮಿ ಭಾವೇಶಾನಂದ ಮಾತನಾಡಿ ರೋಟರಿ ಸಂಸ್ಥೆ ಹಾಗೂ ಸಾಧೂ ವಾಸ್ವಾನಿ ಮಿಷನ್ ಪೂಣೆ ಇವರು ಮಾಡುವಂತ ಇಂತಹ ಕಾರ್ಯ ಮಾನವೀಯತೆಯ ಉತ್ತುಂಗದ ಮಟ್ಟದ ಕಾರ್ಯವಾಗಿದ್ದು ಇಂತಹ ಕಾರ್ಯ ಸದಾಕಾಲ ನಡೆಯಲಿ ಎಂದು ಹಾರೈಸಿದರು. ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ಮಾಂಡ್ಲಿಕ್ ಚೆರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಎಸ್ ಐ ಮಾಂಡಲಿಕ್ ಹಾಗೂ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಮಾಂಡ್ಲಿಕ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರವಾರ ರೋಟರಿ ಕ್ಲಬ್‍ನ ಅಧ್ಯಕ್ಷ ರಾಜೇಶ ವೆರ್ಣೇಕರ ಸ್ವಾಗತಿಸಿದರು. ಸಾಧು ವಾಸ್ವಾನಿ ಮಿಷನ್, ಪುಣೆಯ ವೈದ್ಯಾಧಿಕಾರಿಗಳು ಹಾಗೂ ತಂತ್ರಜ್ಞರಾದ ಡಾ. ಸಲೀಲ್ ಜೈನ, ಮಿಲಿಂದ ಜಾಧವ, ಸುಶಿಲ ಧಗೆ, ಜಿತೆಂದ್ರ ರಾಠೋಡ, ಜ್ಞಾನೇಶ್ವರ ಪಾಟಿಲ, ಬಸವರಾಜ ಪುಟ್ಟಿ, ಸಂತೋಷ ಕಿತ್ತೂರ ಹಾಗೂ ಹಿರೇಮಠ ಅವರು ಶಿಬಿರಾರ್ಥಿಗಳ ಚಿಕಿತ್ಸೆಯನ್ನು ಅತಿ ಕಾಳಜಿಯಂದ ನೆರವೇರಿಸಿದರು. ವೇದಿಕೆಯಲ್ಲಿ ರೋಟರಿ ಸೀಸೈಡ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹಿರೇಮಠ, ಸಹಾಯಕ ಪ್ರಂತಪಾಲ ಮನೋಹರ ಕಾಂಬ್ಳಿ, ಪ್ರದೀಪ ನಾಯ್ಕ, ಇನರ್‍ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಸುಶಿಲಾ ಗಾಂವಕರ ಅಂಕೋಲಾ ರೋಟರಿ ಕ್ಲಬ್‍ನ ಅಧ್ಯಕ್ಷ ವಸಂತ ನಾಯ್ಕ, ಅಂಕೋಲಾ ಗ್ರಾಮೀಣ ಕ್ಲಬ್‍ನ ಅಧ್ಯಕ್ಷ ಪ್ರೊ. ನವೀನ ದೇವರಭಾವಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಫಲಾನುಭವಿಗಳಿಗೆ ಊಟದ ಸೌಲಭ್ಯವನ್ನು ಮಾಡಲಾಗಿತ್ತು. ಈ ಉಚಿತ ಶಿಬಿರ ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಲ್ಲದೇ ನೆರೆಯ ಜಿಲ್ಲೆ ಹಾಗೂ ರಾಜ್ಯಗಳ ಆಕಾಂಕ್ಷಿಗಳು ಈ ಶಿಬಿರದಲ್ಲಿ ಭಾಗವಹಿಸಿದರು.
ಈ ಕೈ-ಕಾಲು ಜೋಡಣಾ ಶಿಬಿರ ರೋಟರಿ ಕ್ಲಬ್‍ನ ಆಡಳಿತ ಡಿಸ್ಟ್ರಿಕ್ಟ್ 3170 ಪ್ರಾಂತದ ಸಮುದಾಯ ಸೇವೆಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಪ್ರತಿಯೊಬ್ಬ ಫಲಾನುಭವಿಗಳಿಗಾಗಿ ರೂ. 10,000/- ರೂ. 15,000/- ವರೆಗೆ ಖರ್ಚು ತಗಲುವ ಜೈಪುರ್ ಲಿಂಬ್ಸನ್ನು ಉಚಿತವಾಗಿ ನೀಡಲಾಗುವುದು. ಈ ಶಿಬಿರಕ್ಕೆ ಪುಣೆಯ ಸಾಧು ವಾಸ್ವಾನಿ ಸಂಸ್ಥೆ ರೂ.10 ಲಕ್ಷ ಹಣವನ್ನು ದಾನದ ರೂಪದಲ್ಲಿ ವಿನಿಯೋಗ ಮಾಡುವುದು.

ಶಿಬಿರದಲ್ಲಿ ಪದ್ಮಶ್ರೀ ಸುಕ್ರಿ ಬೊಮ್ಮು ಗೌಡಾ ಭಾಗವಹಿಸಿ ಶಿಬಿರಾರ್ಥಿಗಳ ಆರೋಗ್ಯ ವಿಚಾರಿಸಿದ್ದು ನೆರೆದ ಜನರ ಗಮನ ಸೆಳೆಯಿತು. ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ, ಲಾಯನ್ಸ ಸಂಸ್ಥೆಯ ಅಧ್ಯಕ್ಷ ಅಲ್ತಾಫ್ ಶೇಖ್ ಶಿಬಿರಾರ್ಥಿಗಳಿಗೆ ನೆರವಾದರು. ರೋಟರಿ ಸದಸ್ಯರಾದ ಕೆ ಡಿ ಪೆಡ್ನೇಕರ, ಪಿ ಎಮ್ ತಾಂಡೇಲ, ಜಿತೇಂದ್ರ ತನ್ನಾ, ಡಾ. ಸಂಜು ನಾಯಕ, ಬಿ ಎಸ ಪ್ಯೆ, ಅಮರನಾಥ ಶೆಟ್ಟಿ, ಪರಶುರಾಮ ಕೊಳ್ವೇಕರ, ಚಂದ್ರಶೇಖರ ನಾಯರ, ಎಲ್ ಎಸ್ ಫರ್ನಾಂಡಿಸ್, ಜಾರ್ಜ ಫರ್ನಾಂಡಿಸ್, ಪ್ರಸನ್ನಾ ತೆಂಡೂಲಕರ, ರಾಘವೇಂದ್ರ ಪ್ರಭು, ಕ್ರಿಷ್ಣಾ ಕೇಳಸಕರ, ಮೋಹನ ನಾಯ್ಕ, ಗಣಪತಿ ಬಾಡಕರ, ರಾಧಿಕಾ ವೆರ್ಣೇಕರ, ಅರ್ಚನಾ ಶೆಟ್ಟಿ, ನೀತಾ ಕಾಂಬ್ಳಿ ಶಿಬಿರಕ್ಕೆ ಸಹಕರಿಸಿದರು.

ರೋಟರಿ ಕ್ಲಬ್ ಸಮುದಾಯ ಸೇವಾ ನಿರ್ದೇಶಕ ಎಮ್. ಪಿ. ಕಾಮತ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಾತಪ್ಪಾ ತಾಂಡೇಲ ವಂದಿಸಿಸರು.