Home Local ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕಿ ಶಾರದಾ ಶೆಟ್ಟಿ.

ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕಿ ಶಾರದಾ ಶೆಟ್ಟಿ.

SHARE

ಹೊನ್ನಾವರ : ತಾಲ್ಲೂಕಿನ ಕರ್ಕಿ ಪಂಚಾಯತ್ ವ್ಯಾಪ್ತಿಯ ಪಾವಿನಕುರ್ವಾ ಮಠದಕೇರಿ ಹತ್ತಿರ ಎಡದಂಡ ಹಾಗೂ ಬಲದಂಡೆಗೆ ಜಲಸಂಪನ್ಮೂಲ( ಸಣ್ಣ ನೀರಾವರಿ) ಇಲಾಖೆಯ ಅಂದಾಜು 50 ಲಕ್ಷ ಅನುದಾನದ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಭೂಮಿಪೂಜೆ ನೆರವೇರಿಸಿದರು.

ಈ ಬಾಗದ ಬಹುದಿನದ ಬೇಡಿಕೆ ಈಗ ಸಂಪೂರ್ಣವಾಗಿದೆ. ಜನತೆಯ ಆಶೋತ್ತರಕ್ಕೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಅಧ್ಯಕ್ಷರಾದ ರಾಯ್ಕರ್, ಮದೂಸೂದನ ಶೇಟ್ ವಿನಾಯಕ ಶೇಟ್ ಹಾಗೂ ಪಂಚಾಯತ್ ಸದಸ್ಯರು, ಅಧಿಕಾರಿಗಳು ಹಾಗೂ ಊರ ನಾಗರಿಕರು ಹಾಜರಿದ್ದರು.