Home Local ಶಿವರಾತ್ರಿಗೆ ವಿಶೇಷ ಕಲ್ಪನೆ ಕೊಟ್ಟಿರುವ ಯುವ ಜನತೆ ಶ್ಲಾಘನೆಗೆ ಅರ್ಹರು: ಪ್ರೋ ಎಂ.ಜಿ ಭಟ್ಟ

ಶಿವರಾತ್ರಿಗೆ ವಿಶೇಷ ಕಲ್ಪನೆ ಕೊಟ್ಟಿರುವ ಯುವ ಜನತೆ ಶ್ಲಾಘನೆಗೆ ಅರ್ಹರು: ಪ್ರೋ ಎಂ.ಜಿ ಭಟ್ಟ

SHARE

ಕುಮಟಾ: ತಾಲೂಕಿನ ಕಡ್ಲೆ ಬೀಚ್ ನಲ್ಲಿ ಪ್ರತೀವರ್ಷದಂತೆ ಈ ವರ್ಷವೂ ಶಿವರಾತ್ರಿ ದಿನದಂದು ಮರಳು ಶಿಲ್ಪ‌ನಿರ್ಮಿಸಿ ಕಾರ್ಯಕ್ರಮ ನಡೆಸಲಾಯಿತು.

ರಾತ್ರಿ ನಡೆದ ಶಿವರಾತ್ರಿ ಉತ್ಸವದ ಕಾರ್ಯಕ್ರಮದಲ್ಲಿ ಶ್ರೀ. ಎಂ ಜಿ ಭಟ್ ಮಾತನಾಡಿ, ಶಿವರಾತ್ರಿ ಆಚರಣೆಯ ಮಹತ್ವವನ್ನು ತಿಳಿಸಿದರು . ಶಿವರಾತ್ರಿ ವಿಶೇಷ ದಿನವಷ್ಟೇ ಅಲ್ಲ ಎಲ್ಲರೂ ಸೇರಿ ಒಟ್ಟಿಗೆ ಆಚರಿಸುವ ರಾತ್ರಿಯಾಗಿದೆ ಎಂದು ಅಭಿಪ್ರಾಯಪಟ್ಟರು.ಹಾಗೂ ಇಂತಹ ಕಾರ್ಯಕ್ರಮ ರೂಪಿಸಿದ ಯುವ ಜನರನ್ನು ಅವರು ಶ್ಲಾಘಿಸಿದರು.

ಅಧ್ಯರಾಗಿ ಸೂರಜ್ ನಾಯ್ಕ ಹಾಗೂ ಅತಿಥಿಗಳಾಗಿ ನಾಗರಾಜ್ ನಾಯಕ್, ವೆಂಕಟ್ರಮಣ ಹೆಗಡೆ , ವೆಂಕಟ್ರಮಣ ಕೌರಿ , ಮಾರುತಿ ಶೆಟ್ಟಿ , ಸೀತಾರಾಮ್ ಗುನಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.