Home Local ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜ ಗಂಗಾವಳಿ-ಗಂಗೆಕೊಳ್ಳ ಇವರ ಆಶ್ರಯದಲ್ಲಿ ಯಶಸ್ವಿಯಾದ ಕ್ರಿಕೆಟ್ ಪಂದ್ಯಾವಳಿ.

ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜ ಗಂಗಾವಳಿ-ಗಂಗೆಕೊಳ್ಳ ಇವರ ಆಶ್ರಯದಲ್ಲಿ ಯಶಸ್ವಿಯಾದ ಕ್ರಿಕೆಟ್ ಪಂದ್ಯಾವಳಿ.

SHARE

ಗೋಕರ್ಣ: ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜ ಗಂಗಾವಳಿ-ಗಂಗೆಕೊಳ್ಳ ಇವರ ಆಶ್ರಯದಲ್ಲಿ ಕೋಂಕಣಿ ಖಾರ್ವಿ ಸಮಾಜದ ಬಾಂಧವರಿಗಾಗಿ ತೃತೀಯ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಗಂಗೆಕೊಳ್ಳದ ಕ್ರಿಕೆಟ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅದ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತಾನಾಡಿದ ಅವರು ಕೊಂಕಣಿ ಖಾರ್ವಿ ಸಮಾಜದವರು ಜೀವದ ಹಂಗು ತೊರೆದು ತಮ್ಮ ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಈ ಸಮಾಜ ಇಂದು ಉತ್ತಮ ಸಂಘಟನೆಯೊಂದಿಗೆ ಈ ಪಂದ್ಯಾವಳಿಯನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಇತ್ತೀಚಿಗೆ ಅಗಲಿದ ಅಮಾಯಕ ಯುವಕ ಪರೇಶ ಮೇಸ್ತ ಇಂದು ನಮ್ಮೆಲ್ಲರಿಗೂ ಸ್ಪೂರ್ತಿ ನೀಡುತ್ತಿದ್ದಾರೆ. ಆತನ ಸ್ಮರಣಾರ್ಥವಾಗಿ ಇಂದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜದಲ್ಲಿನ ಎಲ್ಲ ಹಿಂದೂಗಳು ಇಂದು ಸಂಘಟಿತವಾಗಿ ಒಗ್ಗಟ್ಟಿನ ಬಲ ಪ್ರದರ್ಶಿಸುತ್ತಿದ್ದಾರೆ ಎಂದು ನುಡಿದು ದಿ|| ಪರೇಶ ಮೇಸ್ತನನ್ನು ಸ್ಮರಿಸಿ ಆತನ ಆತ್ಮಕ್ಕೆ ಶಾಂತಿ ಕೋರಿದರು. ಮೀನುಗಾರ ಸಮುದಾಯದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುನ್ನಡೆಯಬೇಕು ಆಗ ಮಾತ್ರ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ. ಯುವ ಜನತೆ ಸುಸಂಸ್ಕøತರಾಗಿ ಉತ್ತಮ ಸಂಘಟನೆಯೊಂದಿಗೆ ಮುನ್ನಡೆಯಲಿ.ಇದಕ್ಕೆ ತಮ್ಮ ಸಂಪೂರ್ಣ ಸಹಕಾರವಿರುವುದಾಗಿ ನುಡಿದರು.

ಮಾಜಿ ಶಾಸಕ ದಿನಕರ ಶೆಟ್ಟಿಯವರು ಮಾತನಾಡಿ ಇಂತಹ ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಏಳ್ಗೆಗೆ ಅಗತ್ಯವಾಗಿದೆ. ಕ್ರೀಡೆ ಸದೃಡ ದೇಹಕ್ಕೆ ಹಾಗೂ ಮನಸ್ಸಿಗೆ ಅತ್ಯಗತ್ಯ ಎಂದರು. ಇಂತಹ ಪಂದ್ಯಾವಳಿಗಳು ಹೆಚ್ಚಬೇಕೆಂದು ಅವರು ಅಭಿಪ್ರಾಯಪಟ್ಟರು.

ಅದ್ಯಕ್ಷತೆ ವಹಿಸಿದ ಸೂರಜ ನಾಯ್ಕ ಸೋನಿ ಅವರು ಅವರು ಮಾತನಾಡಿ ಸಮಾಜ ಭಾಂಧವರೊಡಗೂಡಿ ಆಡುವ ಈ ಕ್ರೀಡೆಯಲ್ಲಿ ಸಿಗುವ ಮಹದಾನಂದ ಬೇರಾವ ಕಡೆಯೂ ದೊರೆಯಲಾರದು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಡಾ|| ಜಿ.ಜಿ. ಹೆಗಡೆ, ಜಿ. ಪಂ. ಸದಸ್ಯೆ ಗಾಯತ್ರಿ ಗೌಡ, ಮಂಜುನಾಥ ಜನ್ನು, ವಿನಾಯಕ ಆಚಾರಿ, ಶಿಲ್ಪಾ ಶಿವಾನಂದ ಗೌಡ, ನಾಗರಾಜ ಎಸ್. ತಾಂಡೇಲ, ಏoಟಿಞಚಿಟಿ ರೇಖಾ ಎಸ್. ತಾಂಡೇಲ, ಶ್ರೀನಿವಾಸ ನಾಯಕ, ಅರುಣ ಕವರಿ ತೊರ್ಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.