Home Local ಭಟ್ಕಳದಲ್ಲಿ ಟವರ್ ನಿರ್ಮಾಣಕ್ಕೆ ಜಾಗ ಬೇಕಿದೆ ಎಂದು ಜಾಹೀರಾತು ನೀಡಿ 45 ಸಾವಿರ ರೂ. ವಂಚಿಸಿದ...

ಭಟ್ಕಳದಲ್ಲಿ ಟವರ್ ನಿರ್ಮಾಣಕ್ಕೆ ಜಾಗ ಬೇಕಿದೆ ಎಂದು ಜಾಹೀರಾತು ನೀಡಿ 45 ಸಾವಿರ ರೂ. ವಂಚಿಸಿದ ಕಂಪನಿ

SHARE

ಭಟ್ಕಳ : ಭಟ್ಕಳದಲ್ಲಿ ಬ್ಯಾಂಕಿನಲ್ಲಿಟ್ಟ ಠೇವಣಿಯನ್ನು ಕೇಂದ್ರ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ನಾವು ಹೆಚ್ಚಿನ ಲಾಭಾಂಶ ನೀಡುತ್ತೇವೆ ಎಂದು ಬೇನಾಮಿ ಕಂಪೆನಿಗಳು ಕೋಟಿಗಟ್ಟಲೆ ಹಣ ವರ್ಗಾಯಿಸಿಕೊಂಡ ಘಟನೆಗಳು ತಾಲೂಕಿನಲ್ಲಿ ಆಗಾಗ ನಡೆದಿರುವುದು ಬೆಳಕಿಗೆ ಬಂದಿದೆ.

ಈಗ ಇಲ್ಲಿನ ಮಾರುಕೇರಿಯ ಕೋಟಖಂಡದ ನಿವಾಸಿಯೋರ್ವರು ಸ್ಥಳೀಯ ಪತ್ರಿಕೆಯಲ್ಲಿ ಟವರ್ ಮಾಡಲು ಗ್ರಾಮಾಂತರ ಪ್ರದೇಶದಲ್ಲಿ ಸ್ಥಳ ಬೇಕಾಗಿದೆ. ಆಕರ್ಷಕ ಬಾಡಿಗೆ ಮತ್ತು ಮುಂಗಡ ನೀಡಲಾಗುವುದು ಆಸಕ್ತಿ ಇದ್ದವರು ಸಂಪರ್ಕಿಸಿ ಎನ್ನುವ ಜಾಹೀರಾತು ನೋಡಿದ್ದು, ಜಾಹೀರಾತಿನಲ್ಲಿನ ಆಕರ್ಷಕ ಯೋಜನೆ ನೋಡಿದ ಅವರು ಕೂಡಲೇ ಸಂಪರ್ಕಿಸಬೇಕಾದ ವಿಳಾಸಕ್ಕೆ ಕರೆ ಮಾಡಿದರು. ನಿಮ್ಮ ಸ್ಥಳದ ಸರ್ವೆ ನಂ. ಸಹಿತ ಕೆಲವು ದಾಖಲೆಗಳನ್ನು ಇಮೇಲ್ ಮಾಡುವಂತೆ ಸೂಚಿಸಿದರು. 2 ದಿನಗಳ ಬಳಿಕ ನಿಮ್ಮ ಸ್ಥಳ ನಮಗೆ ಟವರ ಹಾಕಲು ಯೋಗ್ಯವಾಗಿದೆ. ಇದನ್ನು ನಾವು ಉಪಗ್ರಹದ ಮೂಲಕ ನೋಡಿದ್ದೇವೆ ಮುಂದಿನ ಕಾಗದ ಪತ್ರ ತಯಾರಿಸಲು 2800 ರೂಗಳು ಬೇಕಾಗಿದ್ದು ಅದನ್ನು ಜಮಾ ಮಾಡುವಂತೆ ಖಾತೆ ಸಂಖ್ಯೆಯನ್ನು ನೀಡಿದ್ದಾರೆ. ಹೀಗೆ ತರತರಹದ ವಿಚಾರವನ್ನು ತಿಳಿಸಿ ತಿಂಗಳೊಂದರಲ್ಲಿ ಮಾರುಕೇರಿಯ ನಿವಾಸಿಯ ಬಳಿಯಲ್ಲಿ 45 ಸಾವಿರ ರೂಗಳನ್ನು ಪಡೆದಿದ್ದಾರೆ. ನಂತರ ಮಾರುಕೇರಿಯ ನಿವಾಸಿ ಅನುಮಾನಗೊಂಡು ಕನ್ನಡ ಜನಾಂತರಂಗ ಪತ್ರಿಕೆಗೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ಸಂಗ್ರಹಿಸಿದ ಬಳಿಕ ಇದೊಂದು ಮೋಸ ಮಾಡುವ ಕಂಪೆನಿ ಮತ್ತೆ ಹಣ ನೀಡಬೇಡಿ. ಈ ಕುರಿತು ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿತ್ತು. ಅಂದೆ ದುಡಿದು ಅಂದೆ ತಿನ್ನುವ ಬಡಪಾಯಿ ಯುವಕ ಠಾಣೆಯ ಉಸಾಬರಿಯೆ ಬೇಡಾ ಇಷ್ಟು ಹೋಗಿರುವುದು ಸಾಕು ಮತ್ತಷ್ಟು ಕಳೆದುಕೊಳ್ಳುವುದು ಬೇಡ ಎಂದು ತಲೆಯ ಮೇಲೆ ಕೈಹೊತ್ತ ಮನೆಗೆ ವಾಪಸ್ಸಾಗಿದ್ದಾನೆ.

ಮೋಸ ಮಾಡುವವರು ಹೊಸ ಹೊಸ ವಿಧಾನವನ್ನು ಬಳಸುತ್ತಿದ್ದು, ಪ್ರಾಮಾಣಿಕರು ಕಡಿಮೆಯಾಗಿರುವ ಇಂದಿನ ಕಾಲದಲ್ಲಿ ಅದೆಷ್ಟೇ ಜಾಗೃತರಾಗಿದ್ದರೂ ಅದು ಕಡಿಮೆ. ನಿಮ್ಮ ಸ್ಥಳಕ್ಕೆ ಎಟಿಮ್ ಮಂಜೂರಿ ಮಾಡಿಸುತ್ತೇನೆ. ನನಗೆ ಮುಂಗಡ ನೀಡಿ ಎಂದು ಕೆಲವುಕಡೆಗಳಲ್ಲಿ ತೆರಳಿದ ವಿಷಯವೂ ಬೆಳಕಿಗೆ ಬಂದಿದೆ. ಯಾವುದು ಪಾರದರ್ಶಕವಾಗಿಲ್ಲವೊ ಅದರಲ್ಲಿ ಹಣ ಹೂಡವುದು ಎಂದೆಂದಿಗೂ ಅಪಾಯವೆ. ಅನುಮಾನಗಳಿದ್ದರೆ ಪೊಲೀಸ್ ಠಾಣೆಗೆ ಸಂಪರ್ಕಿಸಿ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ನಾಯ್ಕ ತಿಳಿಸಿದ್ದಾರೆ.