Home Local ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ,- ನಾಗರಾಜ ನಾಯಕ ತೊರ್ಕೆ.

ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ,- ನಾಗರಾಜ ನಾಯಕ ತೊರ್ಕೆ.

SHARE

ಫ್ರೆಂಡ್ಸ್ ಇಲೆವೆನ್ ಬಳಲೆ- ಮಾದನಗೇರಿ ಹಾಗೂ ಊರ ನಾಗರಿಕರ ಆಶ್ರಯದಲ್ಲಿ ಮಾದನಗೇರಿಯ ಹಿ. ಪ್ರಾ. ಶಾಲೆಯ ಕ್ರೀಡಾಂಗಣದಲ್ಲಿ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಪಂದ್ಯಾವಳಿಯ ಸಮಾರೋಪ ಸಮಾರಂಭದಂದು ಬಹುಮಾನ ವಿತರಕರಾಗಿ ಆಗಮಿಸಿದ ರವಿಕುಮಾರ ಶೆಟ್ಟಿ ಅವರು ಮಾತನಾಡಿ ಕ್ರೀಡಾ ಚಟುವಟಿಕೆಗಳು ಹೆಚ್ಚೆಚ್ಚು ಜರುಗುತ್ತಿದ್ದರೆ ಜನರಲ್ಲಿ ಕ್ರೀಡಾಸಕ್ತಿ ಬೆಳೆಯುವುದರೊಂದಿಗೆ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತಂತಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಸಮಾಜದಲ್ಲಿ ಕ್ರೀಡಾ, ಸಾಂಸ್ಕøತಿಕ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಿದಲ್ಲಿ ಪರಸ್ಪರ ಸಾಮರಸ್ಯತೆ ಬೆಸೆಯುತ್ತದೆ. ಕ್ರೀಡೆಗಳು ಮನುಷ್ಯನ ಜೀವನದಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತವೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ, ಒತ್ತಡಮಯ ಬದುಕಿನಲ್ಲಿ ನಮಗೆ ಆರೋಗ್ಯದ ಕಡೆ ಹೆಚ್ಚಿನಗಮನ ಹರಿಸಲು ಸಮಯ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬಿಡುವಿದ್ದಾಗ ಕ್ರೀಡೆಘಳಲ್ಲಿ ತೊಡಗಿಕೊಳ್ಳುವುದರಿಂದ ದೇಹPಕ್ಕೆ ಉತ್ತಮ ವ್ಯಾಯಾಮ ದೊರೆಯುವುದರೊಂದಿಗೆ ಮನರಂಜನೆ ಕೂಡಾ ದೊರೆಯುತ್ತದೆ. ಇದರಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಎಂದರು.

ಈ ಸಂದರ್ಭದಲ್ಲಿ ತೊರ್ಕೆ ಗ್ರಾ.ಪಂ. ಸದಸ್ಯ ಬೀರಾ ವಿ. ಗೌಡ, ತೊರ್ಕೆ ಗ್ರಾ.ಪಂ. ಉಪಾಧ್ಯಕ್ಷ ನಾರಾಯಣ ಎಚ್. ನಾಯ್ಕ, ಧರ್ಮದರ್ಶಿಗಳಾದ ಸುನೀಲ ಪೈ, ಸಗಡಗೇರಿ ಗ್ರಾ. ಪಂ. ಸದಸ್ಯ ಶ್ರವಣ ನಾಯ್ಕ, ಸಗಡಗೇರಿ ಗ್ರಾ. ಪಂ. ಸದಸ್ಯ ಸತೀಶ ಗೌಡ, ಉದ್ಯಮಿ ಆನಂದು ಹರಿಕಾಂತ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.