Home Food ಜನತೆಗೆ ಆತ್ಮಸ್ಥೈರ್ಯ ತುಂಬಿದ ಅದ್ಬುತ ವ್ಯಕ್ತಿ.

ಜನತೆಗೆ ಆತ್ಮಸ್ಥೈರ್ಯ ತುಂಬಿದ ಅದ್ಬುತ ವ್ಯಕ್ತಿ.

SHARE

ಲೇಖಕರು :-ಸಚಿನ ಹಳದೀಪುರ

ಇವರ ಹೆಸರು ಅನ್ಬು ಚಾಲ್ಸ೯.ಇವರು ತಮಿಳುನಾಡಿನ ವಾಮಗಲನವರು.ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು,ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರು.

ಅದು 2005ರ ಸಮಯ.ಅಂದರೆ ಸರಿಸುಮಾರು 12 ವರ್ಷಗಳ  ಹಿಂದಿನ ಮಾತು.ಯಾರು ಕೂಡ ಕನಸಿನಲ್ಲಿಯೂ ಊಹಿಸದ ಸುನಾಮಿ ಅಲೆ ಭೂಮಿಯನ್ನು ಅಪ್ಪಳಿಸಿ ಸಾವಿರಾರು ಕುಟುಂಬವನ್ನು ನಿರ್ಗತಿಕರನ್ನಾಗಿಸಿತು. ಸುನಾಮಿಯ ಅಭ೯ಟದ ಪರಿಣಾಮ ಇಂದಿಗೂ ಅನೇಕರನ್ನು ಪೀಡಿಸುತ್ತಾ ,ಕಾಡುತ್ತಿದೇ.ಸುನಾಮಿಯಿಂದ ತೊಂದರೆಗೆ ಒಳಗಾದವರಿಗೆ ಮಾನಸಿಕ ಸ್ಥೈರ್ಯವನ್ನು ತುಂಬುವ ಕೆಲಸ ಮಾಡುತ್ತಿರುವವರೆ ಅನ್ಬು ಚಾಲ್ಸ೯.

ಇಷ್ಟಕ್ಕೂ ಇವರು ಮಾಡಿರವುದಾದರು  ಏನು ಅಂತೀರಾ…?
ಪರಿಸರ ವಿಕ್ರತಿಯೇ ಸುನಾಮೀಗೆ ಮೂಲ ಕಾರಣವೆಂಬದನ್ನು ಅರಿತ ಇವರು 2005ರಲ್ಲಿಯೇ ತನ್ನ ಏಕಾಂಗಿ ಜೀವನಕ್ಕೆ ಜೀವನಾಧಾರವಾಗಿದ್ದ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದರು.”ನೀವು ಪರಿಸರ ರಕ್ಷೀಸಿದರೆ ಪರಿಸರ ನಿಮ್ಮನ್ನು ರಕ್ಷಿಸುತ್ತದೆ “ಎಂಬ ಧ್ಯೇಯ ವಾಕ್ಯದೊಂದಿಗೆ ಸೈಕಲ ತುಳಿಯುವ ಮೂಲಕ ದೇಶದಾದ್ಯಂತ ಜಾಗ್ರತಿ  ಮೂಡಿಸಲು ಹೊರಟುನಿಂತರು.ಪ್ರತಿ ದಿನ 20kmನಷ್ಟು ಸೈಕಲನಲ್ಲಿಯೇ ಕ್ರಮಿಸುವ ಇವರು ಆಂಧ್ರ ಪ್ರದೇಶ,ಮಹಾರಾಷ್ಟ್ರ ,ಒರಿಸ್ಸಾ,ಪಶ್ಚಿಮ ಬಂಗಾಳ,ರಾಜಸ್ತಾನ,ಗುಜರಾತ ಹೀಗೆ 20 ರಾಜ್ಯಗಳ ಸಂಚಾರವನ್ನು ಮಾಡಿದ್ದಾರೆ.ಇದೀಗ ಇವರ ಜಾಗ್ರತಿ ಅಭಿಯಾನ ಕರ್ನಾಟಕದಲ್ಲಿ ಸಾಗುತ್ತಿದ್ದು,ನಂತರದಲ್ಲಿ ಗೋವಾ,ಮಹಾರಾಷ್ಟ್ರದ ಮೂಲಕವಾಗಿ ದೆಹಲಿಯಿಂದ ಭೂತಾನಗೆ ಹೊಗಲಿದ್ದಾರೆ.ಭಾರತದ ಗೃಹ ಇಲಾಖೆಯ ಒಪ್ಪಿಗೆ ದೊರೆತರೆ ಪಾಕಿಸ್ತಾನದಲ್ಲೂ ಈ ಜಾಗ್ರತಿ  ಅಭಿಯಾನವನ್ನು ನಡೆಸುವ  ಇಚ್ಛೆಯನ್ನು ಹೊಂದಿದ್ದಾರೆ.ಪರಿಸರದ ಜಾಗ್ರತಿಯ ಉದ್ದೇಶವನ್ನು ಹೊಂದಿರುವ ಇವರು  ದಾರಿ ಮದ್ಯ ಸಿಗುವ ಶೈಕ್ಷಣಿಕ ಸಂಸ್ಥೆಗಳಿಗೆ(ಶಾಲೆಗಳಿಗೆ) ಪರಿಸರ ಜಾಗ್ರತಿಯ ಕುರಿತು ಉಪನ್ಯಾಸವನ್ನು ಮಾಡುತ್ತಾರೆ.ಶಾಲೆಯ ಬಿಸಿಯೂಟವೇ ಇವರ ದಿನದ ಊಟವಾಗಿದೆ.ಈ ವರೆಗೂ ಸರಿಸುಮಾರು 20 ಸಾವಿರಕ್ಕೂ ಅಧಿಕ ಉಪನ್ಯಾಸವನ್ನು ಮಾಡಿರುವ ಇವರು, ತಮ್ಮ ಉಪನ್ಯಾಸದಲ್ಲಿ ನೀರಿಗಾಗಿ ಯುದ್ಧವನ್ನು ಎದುರಿಸಬೇಕಾಗಬಹುದು ಎಂಬ ಮುನ್ನೆಚ್ಚರಿಕೆಯನ್ನು ನೀಡುತ್ತಿದ್ದಾರೆ.

ನನ್ನ ಈ ಅಭಿಯಾನಕ್ಕೆ ಮಾಜಿ ರಾಷ್ಟ್ರಪತಿ ಅಬ್ದುಲ ಕಲಾಂರೇ ಪ್ರೇರಣೆ ಎನ್ನುವ  ಇವರು,ತನಗೆ 59 ವರ್ಷ ಆಗಿದ್ದು,ಆ ದೇವರು ನನಗೆ ನೀಡುವ ಕೊನೇಯುಸಿರಿನ ತನಕವೂ ಪರಿಸರ ರಕ್ಷಣೆ,ಜಾಗತಿಕ ತಾಪಮಾನ,ಪ್ಲಾಸ್ಟಿಕ್ ನಿಷೇದ ಹೀಗೆ ಹಲವು ವಿಚಾರಗಳ ಬಗ್ಗೆ ಜಾಗ್ರತಿ ಮೂಡಿಸಲು ಸೈಕಲ ಸಂಚಾರ ಮಾಡುತ್ತಾ ಇರುವುದಾಗಿ ಸಂಕಲ್ಪ ಮಾಡಿದ್ದಾರೆ.ವಿದ್ಯಾರ್ಥಿಗಳು ಪ್ರಾಕ್ಟೀಸಗಾಗಿ ಕಾಗದದ ಮೇಲೆ ಪೆನ್ನು ಇಂಕನ್ನು ಬಳಸಿದರೆ ,ಆ ಕಾಗದವನ್ನು ಪುನಃ ಬಳಸಲು ಸಾದ್ಯವೀಲ್ಲ.ಮತ್ತೇ ಕಾಗದ ತಯಾರಿಕೆಗಾಗಿ ಮರವನ್ನು ಕಡಿಯ ಬೇಕಾಗುತ್ತದೆ . ಮರವನ್ನು ಕಡಿಯುವುದರಿಂದ ಪ್ರಕತಿಯ ಅಸಮತೋಲನ ಉಂಟಾಗುತ್ತದೆ  ಹಾಗಾಗಿ ಕಾಗದದ ಮೇಲೆ ಬರೆಯಲು  ಪೆನ್ಸಿಲ ಬಳಕೆ ಮಾಡಿ ,ಕಾಗದವನ್ನು ಪುನಃ ಬಳಸಿಕೊಳ್ಳಿ ಎಂದು ವಿದ್ಯಾರ್ಥಿಗಳ ಬಳಿ ವಿನಂತಿಸಿ ಕೊಳ್ಳುತ್ತಾರೆ ಚಾರ್ಲ್ಸ್.
“ನಮ್ಮ ಎಲ್ಲ ಸಮಸ್ಯೆಗಳಿಗೂ ಪ್ರಕೃತಿಯಲ್ಲಿ ಉತ್ತರವಿದೆ” ಆದರೆ ಮಾನವ ಪ್ರಕೃತಿ ಎಂಬ ಉತ್ತರ ಪತ್ರಿಕೆಯನ್ನು ಹಾಳು ಮಾಡುತ್ತಿದ್ದಾನೆ. ಈ ಪ್ರಕೃತಿ ಎಂಬ ಉತ್ತರ ಪತ್ರಿಕೆಯನ್ನು ಉಳಿಸಿ ಕೊಂಡರೆ ಬಹುಶ ಸಮಸ್ಯೆಗೆ ಉತ್ತರ ಸಿಗಬಹುದು ಎನ್ನುವ ಕಾರಣದಿಂದಾಗಿ ಓಶೋ  ಒ೦ದು ಹೆಜ್ಜೆ ಮು೦ದೆ ಹೋಗಿ “ನೀವು ಹೊಸದೇನನ್ನೂ ಆವಿಷ್ಕಾರ ಮಾಡಬೇಕಿಲ್ಲ. ಎಲ್ಲವೂ ಪ್ರಕೃತಿಯಲ್ಲಿಯೇ ಇದೆ “ಎಂದು ಹೇಳಿದ್ದು.ಆದರು ಮಾನವ ತನ್ನ ಆಸೆಗಳನ್ನು ಪೋರೈಸಿ ಕೊಳ್ಳಲು ಪರಿಸರವನ್ನು ನಾಶ ಮಾಡಿ ಕೊನೆಗೆ ಪ್ರಕೃತಿ ವಿಕೋಪ ಎಂದು ಬೊಬ್ಬೆ ಹಾಕುತ್ತಾನೆ. ಬೆಂಗಳೂರಿನ ಆಭಿವ್ರದ್ದಿಯ ಹೆಸರಿನಲ್ಲಿ  ಕೇವಲ 9 ವರ್ಷಗಳಲ್ಲಿ ಸರಿಸುಮಾರು 18 ಸಾವಿರ  ಮರಗಳನ್ನು ನಾಶ ಮಾಡಿದ್ದಾರೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು   ಐಐಸಿಯು ನಡೆಸಿದ    ಮರಗಳ ಗಣತಿಯಿಂದ  ಸಾಭಿತು ಆಗಿದೆ. ಪ್ರಕೃತಿ ಇದ್ದರೆ ಮಾತ್ರ ಮಾನವ ಜೀವಿಸಲು ಸಾದ್ಯ.ಮಾನವನ ಇದ್ದರೆ ಮಾನವನ ಅಭಿವೃದ್ದಿ ಸಾದ್ಯ.ಇವೆಲ್ಲ ಗೊತ್ತಿದ್ದರೂ ಮತ್ತೇ ಮರವನ್ನು ನಾಶ ಪಡಿಸಿ ಮಾನವನ ಅಭಿವೃದ್ದಿ ಸಾಧಿಸುತ್ತೇವೇ ಎನ್ನುವವರಿಗೆ   ಏನು ಹೇಳಬೇಕೋ ತಿಳಿಯೊದಿಲ್ಲ .
ನಾನು ,ನನ್ನದು ಎನ್ನುವ ಈ ಸೆಲ್ಫಿ ಪ್ರಪಂಚದಲ್ಲಿ ಸಮಾಜಕ್ಕಾಗಿ ತಮ್ಮ ಜೀವಮಾನ ಕಳೆಯುವವರೂ ಸಿಗುವುದೂ ಬೆರಳಣಿಕೆಯಷ್ಟು ಮಾತ್ರ.ಅಂತಹ ಬೆರಳಣಿಕೆಯ ಲೆಕ್ಕಗಳಲ್ಲಿ ಅನ್ಬು ಚಾಲ್ಸ೯ ಒಬ್ಬರೆಂದರೇ ತಪ್ಪಾಗಲಾರದು.ಸ್ವಹಿತಕ್ಕಾಗಿ ತನಗೆ ಬೇಕಂತೆ ಪರಿಸರವನ್ನು ಹಾಳು ಮಾಡಿಕೊಳ್ಳುವ ಮಾನವನ ಕೆಟ್ಟ ಚಾಳಿಗೆ(ಬುದ್ದಿಗೆ),ಅನ್ಬು ಚಾಲ್ಸ೯ರ ಒಳ್ಳೆಯ ಕೆಲಸವನ್ನು ನಾವೆಲ್ಲರೂ ಪ್ರೇರಣೆಯಾಗಿ ಪಡೆದು ಕೊಳ್ಳಬೇಕಾಗಿದೆ.ಆ ಪ್ರೇರಣೆಯಿಂದಲೇ  ಪರಿಸರವನ್ನು ರಕ್ಷಿಸ ಬೇಕಾಗಿದೆ. ರಕ್ಷೀಸೊಣ. ಸಾದ್ಯವಾದರೆ   ಸಂಚಾರ ಮಾಡುವಾಗ ಅಥವಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಅನ್ಬು ಚಾಲ್ಸ೯ ಸಿಕ್ಕರೆ ಅವರ ಜಾಗ್ರತಿಯ ಸಂಚಾರಕ್ಕೆ ಅಭಿನಂದಿಸಿ ,ಧನ್ಯವಾದ ತಿಳಿಸೋಣಾ….