Home Local ಹನೇಹಳ್ಳಿ-ಸಿದ್ಧೇಶ್ವರ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕಿ ಶಾರದಾ ಶೆಟ್ಟಿ.

ಹನೇಹಳ್ಳಿ-ಸಿದ್ಧೇಶ್ವರ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕಿ ಶಾರದಾ ಶೆಟ್ಟಿ.

SHARE

ಕುಮಟಾ: ತಾಲೂಕಿನ ಹನೇಹಳ್ಳಿ ಪಂಚಾಯತಿಯಲ್ಲಿ ಲೋಕೋಪಯೋಗಿ ಇಲಾಖೆ ಲೆಕ್ಕ ಶೀರ್ಷಿಕೆ 5054 ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿ ಯೋಜನೆಯಡಿ ಅಂದಾಜು 3 ಕೋಟಿ 95 ಲಕ್ಷ ಅನುದಾನದ ಹನೇಹಳ್ಳಿ-ಸಿದ್ಧೇಶ್ವರ ರಸ್ತೆ ಸುಧಾರಣೆ ಕಾಮಗಾರಿಗೆ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಕಾಮಗಾರಿಯ ಸದುಪಯೋಗ ಜನತೆಗೆ ದೊರೆಯಲಿ, ನನ್ನಿಂದ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಯೋಜನೆಗಳ ಅನುಷ್ಟಾನಕ್ಕೆ ಪ್ರಯತ್ನಿಸುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಅರುಣ್ ಗೌಡ, ಸುಮಿತ್ರ ಗೌಡ, ಹನೀಫ ಸಾಬ, ಆನಂದು ನಾಯಕ ಹಾಗೂ ವಿಜಯ ಹೊಸ್ಕಟ್ಟ ಮುಂತಾದವರು ಉಪಸ್ಥಿತರಿದ್ದರು.