Home Local ಸನ್ಮಾನಗಳು ಪ್ರತಿಭೆಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ -ನಾಗರಾಜ ನಾಯಕ ತೊರ್ಕೆ.

ಸನ್ಮಾನಗಳು ಪ್ರತಿಭೆಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ -ನಾಗರಾಜ ನಾಯಕ ತೊರ್ಕೆ.

SHARE

ಕುಮಟಾ: ಸ್ವ ಶಕ್ತಿ ಯುವ ಬಳಗ, ಹಳ್ಕಾರ ಇವರ ಆಶ್ರಯದಲ್ಲಿ ಶಿಕ್ಷಕ ನಾರಾಯಣ ಮಹಾದೇವ ಗುನಗ ಇವರ ಸವಿನೆನಪಿಗಾಗಿ ಸ್ಪರ್ಧೆ-ಸನ್ಮಾನ ಹಾಗೂ ಸಂಭ್ರಮ ಎನ್ನುವ ವಿಶೇಷ ಕಾರ್ಯಕ್ರಮವನ್ನು ಗುನಗನಕೊಪ್ಪದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಈ ಕಾರ್ಯಕ್ರಮವು ಅತ್ಯಂತ ವರ್ಣರಂಜಿತವಾಗಿ ನಡೆಯುತ್ತಿದೆ. ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಸ್ಪರ್ಧಾ ಕಾರ್ಯಕ್ರಮ, ಸಾಧನೆಯ ಹಾದಿಯಲ್ಲಿರುವ ಸಾಧಕರನ್ನು ಅದರಲ್ಲೂ ವಿಶೇಷವಾಗಿ ನಮ್ಮ ದೇಶವನ್ನು ಕಾಯ್ದ ನಿವೃತ್ತ ಯೋಧರನ್ನು ಹಾಗೂ ಜಾನಪದ ಕಣಜ ಎಂದೇ ಗುರುತಿಸಲ್ಪಟ್ಟ ಗ್ರಾಮೀಣ ಪ್ರತಿಭೆ ಸುಕ್ರಜ್ಜಿಯನ್ನು ಸನ್ಮಾನಿಸಿರುವುದು ಅತ್ಯಂತ ವಿಶೇಷ ಹಾಗೂ ಅರ್ಥಪೂರ್ಣವಾಗಿದೆ. ಅಲ್ಲದೇ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಸಾಂಸ್ಕøತಿಕ ಕಾರ್ಯಕ್ರಮಗಳು ಅತ್ಯಗತ್ಯವಾಗಿದ್ದು ಇಂತಹ ಪ್ರತಿಭೆಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತವೆ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಇನ್ನೂ ಅದ್ಧೂರಿಯಾಗಿ ಜರುಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ದಿನಕರ ಕೆ. ಶೆಟ್ಟಿ, ವೆಂಕಟ್ರಮಣ ಹೆಗಡೆ, ಡಾ|| ಜಿ. ಜಿ. ಹೆಗಡೆ, ಪ್ರದೀಪ ನಾಯಕ ದೇವರಬಾವಿ, ಹಾಗೂ ನಂತರ ಆಗಮಿಸಿದ ಸೂರಜ ನಾಯ್ಕ ಸೋನಿ ಮುಂತಾದ ಎಲ್ಲ ಗಣ್ಯರೂ ಕಾರ್ಯಕ್ರಮದ ಸಂಘಟನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕøತೆ ಸುಕ್ರಿ ಬೊಮ್ಮ ಗೌಡ, ನಿವೃತ್ತ ಯೋಧರುಗಳಾದ ಪ್ರಕಾಶ ಜಿ. ಪಟಗಾರ, ಹಳ್ಕಾರ, ವಿನಾಯಕ ವಿ. ಪಟಗಾರ ಹಾಗೂ ಸ್ಥಳಿಯ ಪ್ರತಿಭೆ ಝೀ ಕನ್ನಡ ವಾಹಿನಿಯ ಸರಿಗಮಪ ಲಿಟ್ಲ್ ಚಾಂಪ್ಸ ಸೀಸನ್ 14 ರ ಸ್ಪರ್ಧಿಯಾದ ಕುಮಾರಿ ದೀಕ್ಷಾ ನಾಗರಾಜ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದ ಮೊದಲು ಜರುಗಿದ ನೃತ್ಯ ಎಲ್ಲರ ಮನಸೂರೆಗೊಂಡಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿ. ಪಂ. ಸದಸ್ಯರಾದ ಶಿವಾನಂದ ಹೆಗಡೆ ಕಡತೋಕ ಇವರು ಮಾತನಾಡಿ ಆದುನಿಕ ಒತ್ತಡಮಯ ಜೀವನದಿಂದಾಗಿ ಸಂಬಂಧಗಳು ಕ್ಷೀಣಿಸುತ್ತಿವೆ. ಇಂತಹ ಕಾರ್ಯಕ್ರಮಗಳು ಜರುಗಿದಾಗ ಪರಸ್ಪರ ಸೌಹಾರ್ದತೆ, ಸಾಮರಸ್ಯತೆ ಬೆಳೆಯುತ್ತದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಗಜಾನಾನ ಎಸ್. ಗುನಗ, ಶಂಕರ ಮಾಸ್ತರ, ಸ್ಥಳೀಯ ಮುಖಂಡ ಸಿತಾರಾಮ ಗುನಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಶೀಲಾ ಮೇಸ್ತ ಅವರ ನಿರೂಪಣೆಯಲ್ಲಿ ಡಾನ್ಸ ಡಿವೋಟರ್ಸ್ ಹೊಸ್ಕಟ್ಟ ತಂಡದವರಿಂದ ಡಾನ್ಸ ಕಾರ್ಯಕ್ರಮ ಜರುಗಿತು. ನಂತರ ಮೂರು ದಿನದ ಸಂತೆ ಎನ್ನುವ ಹೃದಯಸ್ಪರ್ಶಿ ನಾಟಕ ಪ್ರದರ್ಶನಗೊಂಡಿತು.