Home Local ಸಾತೋಡ್ಡಿ ಜಲಪಾತದ ಸುತ್ತಮುತ್ತ ಹುಲಿಗಳು : ಕಂಗಾಲಾಗಿದ್ದಾರೆರ ಜನರು!

ಸಾತೋಡ್ಡಿ ಜಲಪಾತದ ಸುತ್ತಮುತ್ತ ಹುಲಿಗಳು : ಕಂಗಾಲಾಗಿದ್ದಾರೆರ ಜನರು!

SHARE

ಯಲ್ಲಾಪುರ: ತಾಲೂಕಿನ ಪ್ರವಾಸಿ ತಾಣವಾದ ಸಾತೋಡ್ಡಿ ಜಲಪಾತದ ಸುತ್ತಮುತ್ತ ಹುಲಿಗಳು ಓಡಾಡುತ್ತಿದ್ದು, ಸ್ಥಳೀಯರನ್ನು ಭಯಗೊಳ್ಳುವಂತೆ ಮಾಡಿವೆ.

ಸಾತೋಡ್ಡಿ ಜಲಪಾತದ ಬಳಿ ರಾತ್ರಿ ವೇಳೆ ಕೆಲವರಿಗೆ ಹುಲಿಗಳು ಕಂಡಿದ್ದು, ಕಳೆದ 3-4 ದಿನಗಳಲ್ಲಿ ಒಂದು ಆಕಳು ಹಾಗೂ 3 ನಾಯಿಗಳನ್ನು ಕಚ್ಚಿಕೊಂಡು ಹೋಗಿದೆ ಎನ್ನಲಾಗಿದೆ. ಈ ಕುರಿತು ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಶೋಧ ನಡೆಸುತ್ತಿದ್ದಾರೆ.

ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಸಾತೊಡ್ಡಿ ಜಲಪಾತ ವಿಕ್ಷೀಸಲು ಆಗಮಿಸುತ್ತಾರೆ. ಹುಲಿಗಳಿಂದ ಯಾವುದೇ ಪ್ರಾಣಹಾನಿಯಾಗದಂತೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅದರಂತೆ ತಾಲೂಕಿನ ಗ್ರಾಮೀಣ ಪ್ರದೇಶದ ವಿವಿಧೆಡೆ ಹುಲಿ ಘರ್ಜನೆ ಕೇಳಿ ಬರುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕಾರಣ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.