Home Local ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದ ಕುಮಟಾದ ಶಿಕ್ಷಕ ರಂಗಾ ಪಟಗಾರ.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದ ಕುಮಟಾದ ಶಿಕ್ಷಕ ರಂಗಾ ಪಟಗಾರ.

SHARE

ಕುಮಟಾ- ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ರಂಗಾ ಪಟಗಾರ ಇವರು ಹಿರಿಯರ ವಿಭಾಗದ 100 ಮೀಟರ್ ಓಟ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರು ಕಳೆದ ವರ್ಷವೂ ಕೂಡ ಹಿರಿಯರ ವಿಭಾಗದಲ್ಲಿ 100 ಮೀಟರ್ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು ಅಲ್ಲದೇ ಈ ಹಿಂದೆ ಕಿರಿಯರ ವಿಭಾಗದಲ್ಲಿ ರಾಜ್ಯಕ್ಕೆ ಚಾಂಪಿಯನ್ ಆಗಿರುವುದು ವಿಶೇಷ.

ಇವರು ಭಟ್ಕಳ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಇವರು ಕುಮಟಾ ತಾಲೂಕಿನ ಹೊಲನಗದ್ದೆಯವರಾಗಿರುತ್ತಾರೆ.