Home Local ಹೊನ್ನಾವರ ಶರಾವತಿ ನದಿಯಲ್ಲಿ ತೇಲಿ ಬಂದ ಮಹಿಳೆಯ ಶವ: ಕೆಲಕಾಲ ಗೊಂದಲ

ಹೊನ್ನಾವರ ಶರಾವತಿ ನದಿಯಲ್ಲಿ ತೇಲಿ ಬಂದ ಮಹಿಳೆಯ ಶವ: ಕೆಲಕಾಲ ಗೊಂದಲ

SHARE

ಹೊನ್ನಾವರ: ತಾಲೂಕಿನ ಒಣ ಮೀನು ಮಾರುಕಟ್ಟೆಯ ಸಮೀಪ ಶರಾವತಿ ನದಿಯಲ್ಲಿ ಇಂದು ಬೆಳಿಗ್ಗೆ ಅಪರಿಚಿತ ಶವ ತೆಲಿಬಂದಿರುವುದು ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.

ಹೆಣ ತೇಲಿಬಂದಿರುವುದನ್ನು ಕಂಡು ಮೀನು ವ್ಯಾಪಾರಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಅಲ್ಲಿಯ ಮೀನುಗಾರರ ಸಹಾಯದಿಂದ ಶವವನ್ನು ಮೇಲೆತ್ತಿದ್ದಾರೆ.

ಮೃತರಾದವರು ಓರ್ವ ಮಹಿಳೆಯಾಗಿದ್ದು ಗುರುತು ಪತ್ತೆಯಾಗಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯ‌ ನಂತರ ಪೂರ್ಣ ಮಾಹಿತಿ ಹೊರಬರಲಿದೆ.