Home Local ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು

ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು

SHARE

ಸಿದ್ದಾಪುರ: ಸಮೀಪದ ಕಣ್ಣಂಗಾಲ ಗ್ರಾಮದ ಜ್ಯೋತಿಲ್ಯಾಂಡ್ ತೋಟದಲ್ಲಿ ವಿದ್ಯುತ್ ಸ್ಪರ್ಶ ದಿಂದ ೨ ಕಾಡಾನೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಬಳಿ ಇದ್ದ ಬೈನೆ ಮರವನ್ನು ತಿನ್ನಲು ಎಳೆದ ಸಂದರ್ಭ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ. ಸುಮಾರು 26 ಮತ್ತು 19 ವರ್ಷ ಪ್ರಾಯದ 2 ಹೆಣ್ಣಾನೆ ಸಾವನ್ನಪ್ಪಿದ್ದು, ಗುಂಪಿನಲ್ಲಿದ್ದ ಕಾಡಾನೆಗಳು ಸುತ್ತಾಡುತ್ತಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿ ಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ