Home Local ಬಾಡ ದೇವಾಲಯಕ್ಕೆ ಹೊಸ ಆಡಳಿತ ಕಮೀಟಿ.

ಬಾಡ ದೇವಾಲಯಕ್ಕೆ ಹೊಸ ಆಡಳಿತ ಕಮೀಟಿ.

SHARE

ಕುಮಟಾ : ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಸ್ಥಾನದ ಅಧಿಕಾರವನ್ನು ಹಳೆಯ ಕಮೀಟಿಯವರು ನೀಡದೇ ಇರುವುದರಿಂದ ತ್ರಿಜೂರಿ ಬೀಗ ಒಡೆದು ನೂತನ ಸಮಿತಿಗೆ ಅಧಿಕಾರವನ್ನು ಹಸ್ತಾಂತರ ಮಾಡಿದ ಘಟನೆ ನಡೆದಿದೆ.
ಬಾಡ ಗ್ರಾಮದ ಗ್ರಾಮ ದೇವಿ ಕಾಂಚಿಕಾ ಪರಮೇಶ್ವರಿ ದೇವಸ್ಥಾನದ ಮೊಕ್ತೆಸರ ಕಮೀಟಿಯನ್ನು ವಿಸರ್ಜಿಸಿ ನೂತನ ವ್ಯವಸ್ಥಾಪನಾ ಸಮಿತಿ ರಚಿಸುವಂತೆ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿದ್ದರು. ಅದರಂತೆಯೇ ಜಿಲ್ಲಾಧಿಕಾರಿಗಳು ಸರಕಾರದ ಆದೇಶದಂತೆ ಬಾಡದ ಕಾಂಚಿಕಾ ಪರಮೇಶ್ವರಿ ದೇವಸ್ಥಾನಕ್ಕೆ 9 ಜನ ಸದಸ್ಯರ ಸಮಿತಿಯನ್ನು ರಚನೆ ಮಾಡಿದ್ದಾರೆ.
ಆದರೆ ದೇವಸ್ಥಾನದ ಆಡಳಿತವನ್ನು ಹಳೆಯ ಆಡಳಿತ ಮಂಡಳಿಯ ಸದಸ್ಯರು ಆಡಳಿತ ಹಾಗೂ ತ್ರಿಜೂರಿನ ಬೀಗ ಹಸ್ತಾಂತರ ಮಾಡದ ಹಿನ್ನೆಲೆಯಲ್ಲಿ ಕುಮಟಾ ತಹಸೀಲ್ದಾರ ಮೇಘರಾಜ ನಾಯ್ಕ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ತ್ರೀಜೂರಿ ಒಡೆದು ಅದರಲ್ಲಿರುವ ಬಂಗಾರದ ಆಭರಣವನ್ನು ಲೆಕ್ಕಾಚಾರ ಮಾಡಿ ನೂತನ ನೇಮಕಗೊಂಡ ಆಡಳಿತ ಮಂಡಳಿಗೆ ಕಾನೂನಾತ್ಮಕವಾಗಿ ದೇವಸ್ಥಾನದ ಆಡಳಿತವನ್ನು ಬುಧವಾರ ಹಸ್ತಾಂತರಿಸಿದರು.
ಕಳೆದ ಕೆಲ ದಿನಗಳ ಹಿಂದೆ ಬಾಡದ ಕಾಂಚಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಜಿಲಾಧಿಕಾರಿಗಳು ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳು ಹೊಸದಾಗಿ 9 ಜನ ಸದಸ್ಯರನ್ನು ನೇಮಿಸಿತ್ತು. ಈ 9 ಜನ ಸದಸ್ಯರು ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ಜೆ.ಎಸ್ ನಾಯ್ಕ್ ಅವರನ್ನೂ ಆಡಳಿತ ಮಂಡಳಿಯ ಅಧ್ಯರಾಗಿ ಆಯ್ಕೆ ಮಾಡಿಲಾಯಿತು. ಆದರೆ ಹಳೆ ಆಡಳಿತ ಮಂಡಳಿಯ ಸದಸ್ಯರಲ್ಲಿ ನೂನವಾಗಿ ಆಯ್ಕೆಯಾದ ಸಮಿತಿಗೆ ಅಧಿಕಾರ ಹಸ್ತಾಂತರಿಸಲು ಕಾನೂನು ರೀತಿಯಲ್ಲಿ ಕುಮಟಾ ತಹಸೀಲ್ದಾರ ಮೇಘರಾಜ ನಾಯ್ಕ ಆದೇಶ ನೀಡಿದ್ದರು. ಆದರೆ
ನೂತನವಾಗಿ ನೇಮಕ ಗೊಂಡಿರುವ ಜೆ.ಎಸ್ ನಾಯ್ಕ್ ಅಧ್ಯಕ್ಷತೆಯ ಆಡಳಿತ ಸಮಿತಿಗೆ ಹಳೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಜಿ.ಕೆ ಪಟಗಾರ ಅವರು ಆಡಳಿತ ಹಸ್ತಾಂತರಿಸದ ಹಿನ್ನೆಲೆಯಲ್ಲಿ ಕಾನೂನು ರೀತಿಯಲ್ಲಿ ನೂತನ ಕಮೀಟಿಗೆ ಅಧಿಕಾರದದ ಜವಬ್ದಾರಿ ನೀಡಲಾಯಿತು.
ಈ ಸಂದರ್ಭದಲ್ಲಿ ಯಾವುದೇ ಘಟನೆ ಸಂಭವಿಸಬಾರದು ಎಂದು ಕುಮಟಾ ಪಿ.ಎಸ್.ಐ ಶಶಿಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿದ್ದರು.
ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರವೀಣ ಶೆಟ್ಟಿ, ಸೋಮಯ್ಯ ಹಳ್ಳೇರ, ಜಯಂತ ನಾಯ್ಕ, ಪರಮೇಶ್ವರ ನಾಯ್ಕ, ಈಶ್ವರ ನಾಯ್ಕ, ದೇವಸ್ಥಾನದ ಮುಖ್ಯ ಅರ್ಚಕ ಉಮೇಶ ಭಟ್ಟ, ಪ್ರವೀಣಾ ಪಾತರಫೇಕರ್ ಹಾಗೂ ನೂರಾರು ಸ್ಥಳೀಯರು ಹಾಜರಿದ್ದರು.
ಸರಕಾರದ ಆದೇಶವಿದ್ದರೂ ಹಳೆ ಆಡಳಿತ ಮಂಡಳಿಯ ಸದಸ್ಯರು ಅಧಿಕಾರ ಹಸ್ತಾಂತರಿಸದ ಹಿನ್ನೆಲೆಯಲ್ಲಿ ಬೀಗ ಒಡೆದು ಅಧಿಕಾರ ಹಾಗೂ ದೇವಸ್ಥಾನದಲ್ಲಿರುವ ವಸ್ತುಗಳ ಜವಬ್ದಾರಿ ನೀಡಲಾಯಿತು. ಹಳೆ ಕಮೀಟಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮೇಘರಾಜ ನಾಯ್ಕ ತಿಳಿಸಿದರು.

ಬಾಡದ ಕಾಂಚಿಕಾರಿ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಲಾಗಿತ್ತು. ಅದರಂತೆಯೇ ನೂತನ ಕಮೀಟಿ ರಚಿಸಲಾಯಿತು. ಆದರೆ ಈ ಹಿಂದೆ ಇದ್ದ ಮೊಕ್ಕೆಸರ ಸಮಿತಿಯು ಅಧಿಕಾರ ಹಸ್ತಾಂತರಿಸದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಜನಾರ್ಧನ ನಾಯ್ಕ ತಿಳಿಸಿದರು.