Home Local ಶ್ರೀ ರಾಮನಾಥ ಸಭಾಭವನ ಉದ್ಘಾಟನೆ ಮತ್ತು “ಕೋಟಿ ಶ್ರೀರಾಮತಾರಕ ಮಂತ್ರ ಮಹಾಯಜ್ಞ” ಕಾರ್ಯಕ್ರಮ.

ಶ್ರೀ ರಾಮನಾಥ ಸಭಾಭವನ ಉದ್ಘಾಟನೆ ಮತ್ತು “ಕೋಟಿ ಶ್ರೀರಾಮತಾರಕ ಮಂತ್ರ ಮಹಾಯಜ್ಞ” ಕಾರ್ಯಕ್ರಮ.

SHARE

ಹೊನ್ನಾವರ: ಶ್ರೀ ರಾಮನಾಥ ದೇವ ಕಡತೋಕ ಮತ್ತು ಶ್ರೀ ಹೊನ್ನಮಾಸ್ತಿ ದೇವಿ ಟ್ರಸ್ಟ್ (ರಿ.) ಮಾಡಗೇರಿ, ತಾ!ಹೊನ್ನಾವರ(ಉ.ಕ.)ಇವರ ಆಶ್ರಯದಲ್ಲಿ ನಡೆದ ಶ್ರೀ ರಾಮನಾಥ ಸಭಾಭವನ ಉದ್ಘಾಟನೆ ಮತ್ತು “ಕೋಟಿ ಶ್ರೀರಾಮತಾರಕ ಮಂತ್ರ ಮಹಾಯಜ್ಞ” ಹಾಗೂ ಭಜನಾ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದ್ದು.

ಇಂದು ‘ಸದ್ಗುರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಮಠಾಧೀಶರು ಶ್ರೀ ರಾಮಕ್ಷೇತ್ರ ಧರ್ಮಸ್ಥಳ ಇವರ ದಿವ್ಯ ಸಾನಿಧ್ಯದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಉದ್ಘಾಟಿಸಿ ಮಾತನಾಡಿದರು.

ಶಕ್ತಿದೇವತೆಯಾದ ಶ್ರೀ ರಾಮನಾಥ ದೇವನ ಸಾನಿಧ್ಯದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಗುರುವಿನ ಸಾನಿಧ್ಯ ಇರುವುದು ಎಲ್ಲರಿಗೂ ಸಂತಸ ತಂದಿದೆ. ಶ್ರೀ ರಾಮನಾಥ ಸಭಾಭವನ ಉದ್ಘಾಟನೆ ಮತ್ತು “ಕೋಟಿ ಶ್ರೀರಾಮತಾರಕ ಮಂತ್ರ ಮಹಾಯಜ್ಞ” ಹಾಗೂ ಭಜನಾ ಸಪ್ತಾಹ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದರು.

ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಶ್ರೀ ರಾಮನಾಥ ಸಭಾಭವನ ಉದ್ಘಾಟನೆ ಮತ್ತು “ಕೋಟಿ ಶ್ರೀರಾಮತಾರಕ ಮಂತ್ರ ಮಹಾಯಜ್ಞ” ಹಾಗೂ ಭಜನಾ ಸಪ್ತಾಹ ಕಾರ್ಯಕ್ರಮ ಸಮೀತಿ ಸದಸ್ಯರು ಹಾಜರಿದ್ದರು.