Home Important ಇಹ ಲೋಕ ತ್ಯಜಿಸಿರುವ ಭಾರತೀಯ ಚಿತ್ರರಂಗದ ಮೋಹಕ ತಾರೆ ಶ್ರೀದೇವಿ ಅವರ ಪಾರ್ಥಿವ ಶರೀರದ ಅಂತಿಮ...

ಇಹ ಲೋಕ ತ್ಯಜಿಸಿರುವ ಭಾರತೀಯ ಚಿತ್ರರಂಗದ ಮೋಹಕ ತಾರೆ ಶ್ರೀದೇವಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಇಂದು.

SHARE

ಮುಂಬೈ: ಇಹ ಲೋಕ ತ್ಯಜಿಸಿರುವ ಭಾರತೀಯ ಚಿತ್ರರಂಗದ ಮೋಹಕ ತಾರೆ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ 9.30ರಿಂದ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಿದ್ದು ನಂತರ 3.30ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ.
54 ವರ್ಷದ ಶ್ರೀದೇವಿ ಅವರು ಸಂಬಂಧಿಕರೊಬ್ಬರ ಮದುವೆ ಸಮಾರಂಭ ಹಿನ್ನಲೆ ದುಬೈಗೆ ತೆರಳಿದ್ದು ಶನಿವಾರ ರಾತ್ರಿ ತಾವು ತಂಗಿದ್ದ ರೂಂನ ಬಾತ್ ಟಬ್ ಗೆ ಆಕಸ್ಮಿಕವಾಗಿ ಬಿದ್ದು ವಿಧಿವಶರಾಗಿದ್ದರು. ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಸ್ವದೇಶಕ್ಕೆ ತೆಗೆದುಕೊಂಡು ಬರುತ್ತಿದ್ದು ರಾತ್ರಿ 9.30ರ ಸುಮಾರಿಗೆ ಮುಂಬೈಗೆ ಬರುವ ಸಾಧ್ಯತೆ ಇದೆ.
ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತೆಗೆದುಕೊಂಡು ಬರಲು ಕಳೆದ ಎರಡು ದಿನಗಳ ಹಿಂದೆಯೇ ರಿಲಯನ್ಸ್ ಗ್ರೂಪ್ ನ ಮುಖ್ಯಸ್ಥ ಅನಿಲ್ ಅಂಬಾನಿ ಅವರು ಖಾಸಗಿ ಜೆಟ್ ದುಬೈಗೆ ತೆರಳಿತ್ತು. 6.30ರ ಸುಮಾರಿಗೆ ಜೆಡ್ ದುಬೈನ ವಿಮಾನ ನಿಲ್ದಾಣದಿಂದ ಹೊರಡಲಿದೆ.
ಅಂಧೇರಿಯದಲ್ಲಿನ ದಿ ಸೆಲೆಬ್ರೆಷನ್ ಸ್ಪೋರ್ಟ್ ಕ್ಲಬ್ ನಲ್ಲಿ 9.30ರಿಂದ 12.30ರವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ ನಂತರ 2.00 ಗಂಟೆಯಿಂದ ಅಂತಿಮ ಮೆರವಣಿಗೆ ಮೂಲಕ ಮುಂಬೈನ ಜುಹುದ ಪವನ್ ಹನ್ಸ್ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಸಂಜೆಗೆ ಹಿಂದು ಪದ್ದತಿಯಂತೆ ಅಂತ್ಯಕ್ರಿಯೆ ನಡೆಯಲಿದೆ.