Home Local ಮಂದಾರ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಕವಲಕ್ಕಿಯವರ ಆಶ್ರಯದಲ್ಲಿ ಸಂಪನ್ನವಾದ ವಾಲಿಬಾಲ್ ಪಂದ್ಯಾವಳಿ.

ಮಂದಾರ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಕವಲಕ್ಕಿಯವರ ಆಶ್ರಯದಲ್ಲಿ ಸಂಪನ್ನವಾದ ವಾಲಿಬಾಲ್ ಪಂದ್ಯಾವಳಿ.

SHARE

ಹೊನ್ನಾವರ: ಮಂದಾರ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಕವಲಕ್ಕಿ(ಉ.ಕ.) ಇವರ ಆಶ್ರಯದಲ್ಲಿ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಂಗ್ರೆಸ್ ಮುಖಂಡರಾದ ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿಯವರು ಹಾಗೂ ಬಿಜೆಪಿ ಮುಖಂಡರಾದ ಸೂರಜ್ ನಾಯ್ಕ ಸೋನಿ,ನಾಗರಾಜ ನಾಯಕ ತೊರ್ಕೆ, ವೆಂಕಟ್ರಮಣ ಹೆಗಡೆ ಹಾಗೂ ಇನ್ನಿತರ ಪ್ರಮುಖರು ಮಾತನಾಡಿ ಶುಭ ಹಾರೈಸಿದರು.

ಶ್ರೀ ರವಿಕುಮಾರ ಶೆಟ್ಟಿಯವರು ಪಂದ್ಯಾವಳಿಯ ಅಂಕಣವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿನಾಯಕ ಶೆಟ್ಟಿ,ಗಣಪತಿ ಶೆಟ್ಟಿ ಹಾಗೂ ಇನ್ನಿತರ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.