Home Local ಪ್ರಸಿದ್ದ ಶಿರಸಿ ಜಾತ್ರೆ ಸಂಭ್ರಮದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ

ಪ್ರಸಿದ್ದ ಶಿರಸಿ ಜಾತ್ರೆ ಸಂಭ್ರಮದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ

SHARE

ಉತ್ತರಕನ್ನಡ : ದಕ್ಷಿಣ ಭಾರತದ ಡೊಡ್ಡ ಜಾತ್ರೆ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ಜಾತ್ರಾ ಆರಂಭಗೊಂಡಿದೆ. 7 ದಿನ ನಡೆಯುವ ಜಾತ್ರೆಗೆ ಭಕ್ತಸಾಗರ ಹರಿದು ಬರುತ್ತಿದೆ. ಗದ್ದುಗೆಯಲ್ಲಿ ವಿರಾಜಮಾನಳಾಗಿರುವ ತಾಯಿ ಮಾರಿಕಾಂಬೆಗೆ ಇಂದು ಬೆಳಿಗ್ಗೆ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಕುಟುಂಬ ಸಮೇತ ಆಗಮಿಸಿ ಪೂಜೆ ಸಲ್ಲಿಸಿದರು.

ಉತ್ತರ ಕ‌ನ್ನಡ ಜಿಲ್ಲೆಯ ಶಿರಸಿಯ ಬಿಡಕಿ ಬೈಲಿನಲ್ಲಿ ವಿರಾಜಮಾನವಾದ ಮಾರಿಕಾಂಬೆಗೆ ಉಡಿ ಸಮರ್ಪಿಸಿದ ಅನಂತಕುಮಾರ್ ಹೆಗಡೆ ನಂತರ ಪೂಜೆ ಸಲ್ಲಿಸಿ ನಂತರ ದೇವಿಯ ಪ್ರಸಾದ ಸ್ವೀಕರಿಸಿದರು.

ನಂತರ ಮಾತನಾಡಿದ ಅನಂತಕುಮಾರ್​​​ ಹೆಗಡೆ ಮಾರಿಕಾಂಬೆ ಶಕ್ತಿ ದೇವತೆಯಾಗಿದ್ದಾಳೆ. ಅಂತಹ ಶಕ್ತಿ ದೇವತೆಯ ದರ್ಶನ ಪಡೆದು ಎಲ್ಲರೂ ಶಕ್ತಿವಂತರಾಗಬೇಕು ಎನ್ನುವ ಮುಖಾಂತರ ಜಾತ್ರೆಗೆ ಬನ್ನಿ ಎಂದು ಎಲ್ಲರನ್ನು ಸ್ವಾಗತಸಿದರು.