Home Food ರುಚಿಕರವಾದ ಟೋಮೆಟೊ ಬಿರಿಯಾನಿ.

ರುಚಿಕರವಾದ ಟೋಮೆಟೊ ಬಿರಿಯಾನಿ.

SHARE

ಬೇಕಾಗುವ ಪದಾರ್ಥಗಳು
ಪಲಾವ್ ಎಲೆ- 2-3
ಚಕ್ಕೆ – 2
ಲವಂಗ – 5
ಏಲಕ್ಕಿ – 2
ಮರಾಟಿ ಮೊಗ್ಗು – 1
ಜೀರಿಗೆ – 1 ಚಮಚ
ಸೋಂಪು – 1 ಚಮಚ
ತುಪ್ಪ – 1 ಚಮಚ
ಈರುಳ್ಳಿ – 1 ಸಣ್ಣಗೆ ಹೆಚ್ಚಿದ್ದು
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹಸಿಮೆಣಸಿನ ಕಾಯಿ – 2-3
ಟೊಮೆಟೊ – ರುಬ್ಬಿದ್ದು 1 ಬಟ್ಟಲು
ಅರಿಶಿನ – ಅರ್ಧ ಚಮಚ
ಅಚ್ಚ ಖಾರದ ಪುಡಿ – 1 ಚಮಚ
ಬಿರಿಯಾನಿ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕ್ಯಾರೆಟ್ – 1 ಸಣ್ಣ ಬಟ್ಟಲು
ಬಟಾಣಿ – 1 ಸಣ್ಣ ಬಟ್ಟಲು
ಪುದೀನಾ – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
ಕೊತ್ತಂಬರಿ ಸೊಪ್ಪು – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
ತೆಂಗಿನ ಕಾಯಿ ಹಾಲು – 1 ಬಟ್ಟಲು
ಅಕ್ಕಿ – ಬಟ್ಟಲು
ಮಾಡುವ ವಿಧಾನ…
ಮೊದಲು ಕುಕ್ಕರ್ ತೆಗೆದುಕೊಂಡು ಅದಕ್ಕೆ 1 ಚಮಚ ತುಪ್ಪ, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಮರಾಟಿ ಮೊಗ್ಗು, ಜೀರಿಗೆ, ಸೋಂಪು, ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ, ರುಬ್ಬಿಕೊಂಡ ಟೊಮೆಟೋ ಹಾಕಿ ಚೆನ್ನಾಗಿ ಎಣ್ಣೆ ಪ್ರತ್ಯೇಕ ಗೊಳ್ಳುವವರೆಗೂ ಕೈಯಾಡಿಸಬೇಕು.
ಬಳಿಕ ಅರಿಶಿನದ ಪುಡಿ, ಅಚ್ಚ ಖಾರದ ಪುಡಿ, ಬಿರಿಯಾನಿ ಪುಡಿ, ಉಪ್ಪು, ಕ್ಯಾರೆಟ್, ಬಟಾಣಿ, ಪುದೀನಾ, ಕೊತ್ತಂಬರಿ ಸೊಪ್ಪು, ತೆಂಗಿನ ಕಾಯಿ ಹಾಲು, ನೀರು ಒಂದು ಬಟ್ಟಲು, ಅಕ್ಕಿಯನ್ನು ಹಾಕಿ ಕುಕ್ಕರ್ ಮುಚ್ಚಳವನ್ನು ಹಾಕಿ 2-3 ಕೂಗು ಬಂದ ಬಳಿಕ ತೆಗೆದರೆ ರುಚಿಕರವಾದ ಟೊಮೆಟೋ ಬಿರಿಯಾನಿ ಸವಿಯಲು ಸಿದ್ಧ.