Home Local ಹಾಲಕ್ಕಿಗಳಜೊತೆ ಸುಗ್ಗಿಗೆ ಹೆಜ್ಜೆ ಹಾಕಿದ ಅನಂತ್ ಕುಮಾರ್ ಹಾಗೂ ಕಾರವಾರದ ನಾಗರಾಜ ನಾಯಕ

ಹಾಲಕ್ಕಿಗಳಜೊತೆ ಸುಗ್ಗಿಗೆ ಹೆಜ್ಜೆ ಹಾಕಿದ ಅನಂತ್ ಕುಮಾರ್ ಹಾಗೂ ಕಾರವಾರದ ನಾಗರಾಜ ನಾಯಕ

SHARE

ಅಂಕೋಲಾ: ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವರಾದ ಸನ್ಮಾನ್ಯ ಶ್ರೀ ಅನಂತಕುಮಾರ ಹೆಗಡೆ ಯವರು ಅವರ್ಸಾದ ಪಡ್ತಿ ಸಮಾಜದ ಸುಗ್ಗಿ ಸ್ಥಳಕ್ಕೆ ಭೇಟಿನೀಡಿದರು.

ಸನ್ಮಾನ್ಯ ಮಂತ್ರಿಗಳು ಮತ್ತು ಬಿಜೆಪಿಯ ಮುಖಂಡರಾದ ನ್ಯಾಯವಾದಿ ನಾಗರಾಜರವರು ಕುಂಚ ಧರಿಸಿ ಸುಗ್ಗಿ ತಂಡದೊಂದಿಗೆ ಹೆಜ್ಜೆಹಾಕಿದರು. ಮಂತ್ರಿಗಳು ಮತ್ತು ನ್ಯಾಯವಾದಿ ನಾಗರಾಜ ನಾಯಕ ಕುಣಿಯುತ್ತಿದ್ದಂತೆ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಸನ್ಮಾನ್ಯ ಮಂತ್ರಿಗಳು ಅವರ್ಸಾದ ಮಾತೃಭೂಮಿ ಸಮಿತಿ(ರಿ.) ಗೂ ಸಹ ಭೇಟಿನಿಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಅಂಕೋಲಾ ಮಂಡಳ ಅಧ್ಯಕ್ಷರಾದ ನಂದು ಗಾವಂಕರ, ಮಾತೃಭೂಮಿ ಅಧ್ಯಕ್ಷರಾದ ಅನಂತ ಭಟ್, ಉಪಾಧ್ಯಕ್ಷರಾದ ಮಹದೇವ ಟಿ. ತಳೇಕರ , ಕಾರ್ಯದರ್ಶಿಯಾದ ಮಹೇಶ ಎಂ. ನಾಯಕ , ಖಾಜಾಂಚಿಯಾದ ಮಹೇಶ ಆರ್. ನಾಯ್ಕ , ಮತ್ತು ಮಾತೃಭೂಮಿಯ ಸದಸ್ಯವೃಂದ , ಜಿಲ್ಲಾ ಮಹಿಳಾ ಮೋರ್ಚಾ ಪ್ರಭಾರಿ ರೂಪಾಲಿ ನಾಯ್ಕ, ರಾಮಚಂದ್ರ ಹೆಗಡೆ, ಬಿಂದೇಶ್ ನಾಯಕ ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು.