Home Local ಬೈಕ್ ಮತ್ತು ಬಸ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ಬೈಕ್ ಮತ್ತು ಬಸ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

SHARE

ಬೈಕ್ ಸ್ಕಿಡ್ ಆಗಿ ಬಸ್ಸಿನಡಿ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಾಗ ಘಟನೆ ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯ ತಾಲ್ಲೂಕು ಪಂಚಾಯ್ತಿಗಳು ಎದುರು ಗುರುವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದ ಅಡಿಕೆ ವ್ಯಾಪಾರಿ ವಿಶ್ವನಾಥ ಶ್ರೀಪಾದ ಶಾನಭಾಗ ( ದಯಾನಂದ ಶಾನಭಾಗ)(60) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದು, ಬಸ್ ಬೆಲ್ ರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಓವರ್‌ ಟೇಕ್ ಮಾಡಲು ಹೋಗಿ ರಸ್ತೆ ಪಕ್ಕದಲ್ಲಿ ಗಟಾರದಿಂದ ತೆಗೆದು ಹಾಕಿದ್ದ ಮಣ್ಣಿನ ಮೇಲೆ ಬೈಕ್ ಹೋಗಿ ಸ್ಕಿಡ್ ಆಗಿ ಬಿದ್ದಿದೆ
ಬೈಕ್ ನಿಂದ ಬಿದ್ದ ಬೈಕ್ ಸವಾರ ಬಸ್ ನ ಹಿಂದಿನ ಟೈರ್ ಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.