Home Local ಪ್ರಶಾಂತಿ ಶಿಕ್ಷಣ ಸಂಸ್ಥೆಯ ಯೋಗ ಕೇಂದ್ರದಲ್ಲಿ ಪತಂಜಲಿ ಯೋಗ ಸಮಿತಿ ಹರಿಧ್ವಾರ ಇದರ ಶಾಖೆಯಿಂದ ಶಿಬಿರಾರ್ಥಿಗಳಿಗೆ...

ಪ್ರಶಾಂತಿ ಶಿಕ್ಷಣ ಸಂಸ್ಥೆಯ ಯೋಗ ಕೇಂದ್ರದಲ್ಲಿ ಪತಂಜಲಿ ಯೋಗ ಸಮಿತಿ ಹರಿಧ್ವಾರ ಇದರ ಶಾಖೆಯಿಂದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ.

SHARE

ಸಿದ್ದಾಪುರ:ಪಟ್ಟಣದ ಪ್ರಶಾಂತಿ ಶಿಕ್ಷಣ ಸಂಸ್ಥೆಯ ಯೋಗ ಕೇಂದ್ರದಲ್ಲಿ ಪತಂಜಲಿ ಯೋಗ ಸಮಿತಿ ಹರಿಧ್ವಾರ ಇದರ ಸಿದ್ದಾಪುರ ಶಾಖೆಯಿಂದ 25ದಿನಗಳ ಕಾಲ ನಡೆದ ಯೋಗಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಸೋಮವಾರ ಪ್ರಮಾಣಪತ್ರ ವಿತರಿಸಲಾಯಿತು.
ಪ್ರಮಾಣ ಪತ್ರವಿತರಿಸಿ ಮಾತನಾಡಿದ ಪತಂಜಲಿ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಜಿ ಅವರು ಯೋಗಾಭ್ಯಾಸ ಪ್ರತಿಯೊಬ್ಬರಿಗೂ ಬೇಕು. ಇದರಿಂದ ರೋಗ ಮುಕ್ತ ಜೀವನ ನಡೆಸಲು ಸಾಧ್ಯ. ಆದ್ದರಿಂದ ತಾಲೂಕಿನ ಎಲ್ಲ ಕಡೆಗಳಲ್ಲಿ ಯೋಗ ಶಿಬಿರಗಳು ನಡೆಯಬೇಕು ಎಂದು ಹೇಳಿದರು.
ಪ್ರಶಾಂತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಜಿ.ಪೈ.ಮಂಜೈನ್, ಉದ್ಯಮಿ ಆನಂದ ಈರಾ ನಾಯ್ಕ ಹೊಸೂರು, ಯೋಗ ಶಿಕ್ಷಕರಾದ ರಘುರಾಮ ಹೆಗಡೆ, ಮಂಜುನಾಥ ನಾಯ್ಕ, ವೀಣಾ ಶೇಟ್ ಇತರರಿದ್ದರು.
ತಾಲೂಕಿನಲ್ಲಿ ಯೋಗ ಶಿಬಿರ ನಡೆಸುವ ಆಸಕ್ತರು ಮಂಜುನಾಥ ನಾಯ್ಕ (9108514104) ಅವರನ್ನು ಸಂಪರ್ಕಿಸುವಂತೆ ತಾಲೂಕು ಪತಂಜಲಿ ಯೋಗ ಸಮಿತಿ ತಿಳಿಸಿದೆ.