Home Local ಕ್ರೀಡೆಗಳಿಂದ ಸದಾ ಚಟುವಟಿಕೆ ಹಾಗೂ ಏಕಾಗ್ರತೆಯಿಂದಿರಲು ಸಾಧ್ಯ – ನಾಗರಾಜ ನಾಯಕ ತೊರ್ಕೆ

ಕ್ರೀಡೆಗಳಿಂದ ಸದಾ ಚಟುವಟಿಕೆ ಹಾಗೂ ಏಕಾಗ್ರತೆಯಿಂದಿರಲು ಸಾಧ್ಯ – ನಾಗರಾಜ ನಾಯಕ ತೊರ್ಕೆ

SHARE

ಹೊನ್ನಾವರ: ತಾಲೂಕಿನ ಕೊಂಡಾಕುಳಿಯ ಶೃಂಗಾರ ಕ್ರಿಕೆಟ್ ಕ್ಲಬ್ ಇವರ ಆಶ್ರಯದಲ್ಲಿ ಮುಕ್ತ ಟೆನ್ನಿಸ್ ಹಾರ್ಡ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಹೊನ್ನಾವರದ ಸಿಂಗಾರ ಬೇಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕ್ರೀಡೆಗಳು ಮಾನವನ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗುವುದರೊಂದಿಗೆ ಸದಾ ಚಟುವಟಿಕೆ ಹಾಗೂ ಏಕಾಗ್ರತೆಯಿಂದಿರಲು ಸಾಧ್ಯವಾಗುತ್ತದೆ. ಸ್ಪರ್ಧೆ ಎಂದಾಗ ಸೋಲು ಗೆಲುವು ಸ್ವಾಭಾವಿಕವಾಗಿದೆ. ಸೋಲು ಗೆಲುವಿನ ಬಗ್ಗೆ ಚಿಂತಿಸದೇ ಉತ್ತಮ ಕ್ರೀಡಾ ಮನೋಭಾವನೆಯೊಂದಿಗೆ ನಿರ್ಣಾಯಕರ ನಿರ್ಣಯಗಳಿಗೆ ಬದ್ಧರಾಗಿರಬೇಕು ಎಂದು ಸಲಹೆ ನೀಡುವುದರೊಂದಿಗೆ ಮುಂದಿನ ದಿನಗಳಲ್ಲಿ ತಮ್ಮ ಸಹಾಯ ಸಹಕಾರ ಸದಾ ಇರುವುದಾಗಿ
ತಿಳಿಸಿದರು.

ಉದ್ಯಮಿ ವೆಂಕಟ್ರಮಣ ಹೆಗಡೆ ಅವರು ಕ್ರೀಡಾಂಗಣವನ್ನು ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭಕೋರಿದರು.

ಅಧ್ಯಕ್ಷತೆ ವಹಿಸಿದ ಹೊಸಾಕುಳಿ ಗ್ರಾಮ ಪಂಚಾಯತದ ಅಧ್ಯಕ್ಷ ಸುರೇಶ ಶೆಟ್ಟಿ ಭಾಸ್ಕೇರಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಸಾಲ್ಕೋಡ ಗ್ರಾ. ಪಂ. ಅಧ್ಯಕ್ಷೆ ಶಾಂತಿ ನಾಯ್ಕ, ಮುಗ್ವಾ ಗ್ರಾ. ಪಂ. ಅಧ್ಯಕ್ಷ ಟಿ.ಎಸ್.ಹೆಗಡೆ ಕೊಂಡಕೇರಿ, ಉದ್ಯಮಿ ವಿನಾಯಕ ಎಂ. ಶೆಟ್ಟಿ, ಸಾಲ್ಕೋಡ ಗ್ರಾ. ಪಂ. ಸದಸ್ಯ ಬಾಲಚಂದ್ರ ಜಿ. ನಾಯ್ಕ, ಮಾವಿನಕುರ್ವಾ ಗ್ರಾ. ಪಂ. ಸದಸ್ಯೆ ಶಶಿಕಲಾ ಸಿ. ಆಚಾರಿ, ರೋಷನ್ ಶಾನಭಾಗ, ವಿನಂಯ್ ಎಸ್. ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.