Home Important ಗೋ ಪ್ರಾಣ ರಕ್ಷಣೆಗೆ ಅಭಯಾಕ್ಷರ

ಗೋ ಪ್ರಾಣ ರಕ್ಷಣೆಗೆ ಅಭಯಾಕ್ಷರ

SHARE

ನಮ್ಮ ಸನಾತನ ಸಂಸ್ಕೃತಿಯ ಭವ್ಯ ಪರಂಪರೆಯಲ್ಲಿ ಮಹತ್ವದ ಸ್ಥಾನ ಗೋವಿನದ್ದಾಗಿದೆ. ಆದರೆ ವರ್ತಮಾನದ ರಾಜಕೀಯ ಪ್ರೇರಿತ ಧರ್ಮವಿದ್ರೋಹಿ ಮನಸ್ಥಿತಿಯ ಸುನಾಮಿಯ ಹೊಡೆತ ಅವ್ಯಾಹತವಾಗಿ ಗೋವಿನ ಮೇಲಾಗುತ್ತಿದೆ. ಆರ್ಥಿಕವಾಗಿ ಹಾಗು ತಂತ್ರಗಾರಿಕೆಯ ರಾಜಕೀಯದಲ್ಲಿ ಬಲಾಡ್ಯರಾಗಿರುವ ಗೋಘಾತಿಗಳ ಹಾಗೂ ಗೋಹತ್ಯಾವಾದಿಗಳಿಂದ ಗೋಮಾತೆಗೆ ರಕ್ಷಣೆ ಒದಗಿಸಲು ಪರಮಪೂಜ್ಯ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರು ದೇಶಾದ್ಯಂತ ಗೋರಕ್ಷಾ ಆಂದೋಲನದ ಕಿಚ್ಚನ್ನು ಹಚ್ಚಿ, ಗೋಜಾಗೃತಿ ಮೂಡಿಸುತಿದ್ದಾರೆ.

ಗೋಪ್ರೇಮಿಗಳಾದ ನಾವು
ಈ ಆಂದೋಲನದಲ್ಲಿ ತೊಡಗಿಸಿಕೊಂಡು ಗೋರಕ್ಷಾ ಮಹಾ ಯಜ್ಞದ ಸಣ್ಣ ಕಿಡಿಗಳಾಗಿದ್ದೇವೆ.
ಈ ಹಂತದಲ್ಲಿ ನಮಗೆ ಭಾವನಾತ್ಮಕವಾಗಿ ಗೋಮಾತೆ ಎಷ್ಟು ಮಾನ್ಯವಾದದ್ದು ಎಂದು ವಿಶ್ವಕ್ಕೆ ಪ್ರಸ್ತುತ ಪಡಿಸುವುದರ ಮೂಲಕ ಗೋವಿರೋಧಿಗಳಿಗೆ ದಿಟ್ಟ ಉತ್ತರ ನೀಡಲೇಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಭಯಾಕ್ಷರ ದ ಭೃಹತ್ ಆಂದೋಲನಕ್ಕೆ ಚಾಲನೆ ನೀಡಲು ಪೂಜ್ಯಗುರುಗಳು ದಿವ್ಯಾಶೀರ್ವಾದ ಮಾಡಿದ್ದಾರೆ.ಎಂದು ಸಮೀತಿಯವರು ತಿಳಿಸಿದ್ದಾರೆ.

ಅಭಯಾಕ್ಷರ ಶುಭಾರಂಭ

ಶ್ರೀರಾಮಾಶ್ರಮದಲ್ಲಿ
17.6. 2017 ಶನಿವಾರ
ಬೆಳಿಗ್ಗೆ 8.45ಕ್ಕೆ ಶ್ರೀರಾಮಮಂದಿರದಲ್ಲಿ ಪ್ರಾರ್ಥನೆ-ಪೂಜೆ
ನಂತರ ಅಭಿಯಾನಕ್ಕೆ ತಯಾರಿ-ತರಬೇತಿ
10 ಘಂಟೆಯಿಂದ ಗಿರಿನಗರದ ಎಲ್ಲಾ ರಸ್ತೆಗಳಲ್ಲಿ ಮನೆ-ಮನೆ ಅಭಿಯಾನ ನಡೆಯಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
ಎಲ್ಲರೂ ಸಹಗೂಡಿ ಶ್ರೀಸಂಸ್ಥಾದವರ ಗೋರಕ್ಷಣಾ ಆಂದೋಲನದ ಪ್ರತೀ ಘಟ್ಟದಲ್ಲೂ ಭಾಗಿಯಾಗಿ ಗೋ~ರಾಮರಾಜ್ಯ ಕಟ್ಟಲು
ಅಭಯ ಚಾತುರ್ಮಾಸ್ಯ ಸಮಿತಿಯವರು ವಿನಂತಿಸಿದ್ದಾರೆ.