Home Important ಹೋಳಿ ಹಬ್ಬದ ಸಂಭ್ರಮ ಗಂಗಾವತಿಯಲ್ಲಿ ಈ ಯುವಕನ ಪಾಲಿಗೆ ಮೃತ್ಯು ತಂದಿತೇ.?

ಹೋಳಿ ಹಬ್ಬದ ಸಂಭ್ರಮ ಗಂಗಾವತಿಯಲ್ಲಿ ಈ ಯುವಕನ ಪಾಲಿಗೆ ಮೃತ್ಯು ತಂದಿತೇ.?

SHARE

ಗಂಗಾವತಿ: ನಾಡಿನೆಲ್ಲೆಡೆ ಹೋಳಿ ಹಬ್ಬದ ಸಡಗರ ಮನೆ ಮಾಡಿದೆ. ಆದರೆ ಇದೇ ಸಂಭ್ರಮಾಚರಣೆಗಾಗಿ ಬೆಂಗಳೂರಿನಿಂದ ತನ್ನ ಊರಿಗೆ ಬಂದಿದ್ದ ಯುವಕನೊಬ್ಬ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದಿದೆ.
ಗಂಗಾವತಿ ನಗರದ 13ನೇ ವಾರ್ಡ್ ನಿವಾಸಿ ಸಾಗರ್ ಕುಮಾರ್ (21) ಮೃತ ದುರ್ದೈವಿಯಾಗಿದ್ದು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಹೋಳಿ ಹಬ್ಬಕ್ಕೆಂದು ಮಾ.1ರಂದು ಗಂಗಾವತಿಗೆ ಬಂದಿದ್ದ.
ಮಾ.2ರಂದು ಸ್ನೇಹಿತರೊಡನೆ ಹೋಳಿ ಆಚರಣೆಯಲ್ಲಿ ತೊಡಗಿದ್ದು ಬಣ್ಣದ ನೀರೆರಚಿ ಸಂಭ್ರಮಿಸಿದ್ದ. ಆ ನಂತರ ಸ್ನೇಹಿತರೊಡನೆ ಕಂಪ್ಲಿ ಬಳಿಯ ತುಂಗಭದ್ರಾ ನದಿಗೆ ಸ್ನಾನಕ್ಕೆಂದು ಇಳಿದಿದ್ದ ಸಾಗರ್ ಸ್ನಾನ ಮಾಡುತ್ತಿದ್ದಾಗಲೇ ಕಾಲು ಜಾರಿ ಮುಳುಗಿದ್ದಾನೆ.

ಇದನ್ನು ನೋಡಿದ ಸ್ಥಳೀಯ ಮೀನುಗಾರರು ಯುವಕನನ್ನು ನೀರಿನೆಂದೆತ್ತಿ ಸ್ಥಳೀಯ ಆಸ್ಪತ್ರೆಗೆ ದಾಕಲಿಸಲು ಮುಂದಾಗಿದ್ದಾರೆ. ಆದರೆ ಹೀಗೆ ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಮಾರ್ಗ ಮಧ್ಯೆಯೇ ಸಾಗರ್ ಪ್ರಾಣ ಬಿಟ್ಟಿದ್ದಾನೆ.