Home Local ಚಲಿಸುತ್ತಿದ್ದ ರೈಲಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ವಿದ್ಯಾರ್ಥಿ: ಭಟ್ಕಳದಲ್ಲಿ ನಡೆಯಿತು ಮನ ಕಲಕುವ ಘಟನೆ.

ಚಲಿಸುತ್ತಿದ್ದ ರೈಲಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ವಿದ್ಯಾರ್ಥಿ: ಭಟ್ಕಳದಲ್ಲಿ ನಡೆಯಿತು ಮನ ಕಲಕುವ ಘಟನೆ.

SHARE

ಭಟ್ಕಳ: ಚಲಿಸುತ್ತಿದ್ದ ರೈಲಿನಲ್ಲಿ ಹೃದಯಾಘಾತಕ್ಕೊಳಗಾದ ವೈದ್ಯ ವಿದ್ಯಾರ್ಥಿಯೋರ್ವ ಮಂಗಳಾ ಎಕ್ಸಪ್ರೆಸ್ಸ ರೈಲಿನಲ್ಲಿ ಸಾವನ್ನಪಿದ್ದಾನೆ.

ಮೃತ ವಿದ್ಯಾರ್ಥಿ ಮಣಿಪಾಲದ ಮೆಡಿಕಲ್ ಕಾಲೇಜಿನ ಉತ್ತರ ಪ್ರದೇಶದ ಜಾನ್ಸಿ ಮೂಲದ ಕೃಷ್ಣಕುಮಾರ ಕುಶವಾ ಎಂದು ತಿಳಿದು ಬಂದಿದೆ.

ಉತ್ತರ ಪ್ರದೇಶದಿಂದ ಮಣಿಪಾಲದ ಕಾಲೇಜಿಗೆ ರೈಲಿನಲ್ಲಿ ತೆರಳುತ್ತಿದ್ದ ಸಂಧರ್ಭದಲ್ಲಿ ರೈಲಿನಲ್ಲಿಯೇ ಹೃದಯಾಘಾತಕ್ಕಿಡಾಗಿ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ರೈಲು ಭಟ್ಕಳದಲ್ಲಿ ನಿಂತಿದ್ದು, ತಕ್ಷಣಕ್ಕೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಈ ಕುರಿತು ಕೊಂಕಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.