Home Local ಮಕ್ಕಳಿಂದ ಮೊಬೈಲ್ ದೂರವಿಡಿ : ಸುಬ್ರಾಯ ವಾಳ್ಕೆ

ಮಕ್ಕಳಿಂದ ಮೊಬೈಲ್ ದೂರವಿಡಿ : ಸುಬ್ರಾಯ ವಾಳ್ಕೆ

SHARE

ಕುಮಟಾ: ಪಾಲಕರೇ ನಿಮ್ಮ ಮಕ್ಕಳ ಮುಂದುಗಡೆ ನೀವುಗಳು ಮೊಬೈಲ್ ಬಳಕೆ ಮಾಡದಿರಿ, ನಾವು ಮಾಡುವ ಮೊಬೈಲ್ ಬಳಕೆಯಿಂದ ನಮ್ಮ ಮಕ್ಕಳ ಗಮನ ಮೊಬೈಲ್ ಮೇಲೆ ಬೇರೆ ರೀತಿಯಲ್ಲಿ ಪರಿಗಣಿಸುತ್ತದೆ ಎಂದು ಖ್ಯಾತ ಚಲನಚಿತ್ರ ನಿರ್ಮಾಪಕರು ಹಾಗೂ ಅಭಿವೃದ್ಧಿ ಕನಸುಗಾರ ಸುಬ್ರಾಯ ವಾಳ್ಕೆ ನುಡಿದರು.

ಕುಮಟಾದ ಅಳ್ವೆಕೋಡಿಯ ನಿರ್ಮಲಾ ಕಾಮತ ಹೈಸ್ಕೂಲಿನಲ್ಲಿ ನಡೆದ 2017-18 ಸಾಲಿನ ಶಾಲಾ ವಾರ್ಷಿಕ ಶೈಕ್ಷಣಿಕ, ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಪ್ರಶಸ್ತಿ ವಿತರಣಾ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಕುಮಟಾದ ಉದ್ಯಮಿಗಳು ಆದ ಸಂಜೀವ ಕಾಮತ ಭಾಗವಹಿಸಿದರು.