Home Local ಪ್ರಾರ್ಥನಾ ಪ್ರತಿಷ್ಠಾನ ಲೋಕಾರ್ಪಣ

ಪ್ರಾರ್ಥನಾ ಪ್ರತಿಷ್ಠಾನ ಲೋಕಾರ್ಪಣ

SHARE

ಭಟ್ಕಳ: ಶಿಕ್ಷಣ, ಸಾಹಿತ್ಯ, ಸಂಸ್ಕøತಿಗಳನ್ನು ಪೋಷಿಸುವಂತಹ ಸೃಜನಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸುವ ಸದುದ್ದೇಶದಿಂದ ಆರಂಭಗೊಂಡ ಪ್ರಾರ್ಥನಾ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಶಾಸಕ ಮಂಕಾಳು ವೈದ್ಯ ಲೋಕಾರ್ಪಣೆ ಮಾಡಿದರು.

ಶಿರಾಲಿಯ ಚಿತ್ರಾಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಪ್ರಾರ್ಥನಾ ಪ್ರತಿಷ್ಠಾನದ ನಾಮಫಲಕವನ್ನು ಅನಾವರಣಗೊಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಶ್ರೀಧರ ಶೇಟ್, ಹಿರಿಯ ಸಾಹಿತಿ ವಿ.ಗ.ನಾಯಕ, ಮೋಹನ ಹಬ್ಬು, ಜಿ.ಪಂ.ಅಧ್ಯಕ್ಷೆ ಜಯಶ್ರೀ ಮೊಗೇರ, ತಹಶೀಲ್ದಾರ ವೀರೇಂದ್ರ ಬಾಡಕರ, ತಾ.ಪಂ. ಕಾಯನಿರ್ವಹಣಾಧಿಕಾರಿ ಸಿ.ಟ. ನಾಯ್ಕ, ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಉಪಸ್ಥಿತರಿದರು. ಸಾಹಿತ್ಯ, ಸಂಗೀತ, ಸಂಸ್ಕøತಿಯನ್ನು ಪೋಷಿಸುವ, ಯುವ ಪ್ರತಿಭಾವಂತರಿಗೆ ತರಬೇತಿ ಹಾಗು ವೇದಿಕೆಯನ್ನು ಒದಗಿಸುವದ್ನು ಪ್ರಾರ್ಥನಾ ಪ್ರತಿಷ್ಠಾನದ ಉದ್ದೇಶವಾಗಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥ ಗಂಗಾಧರ ನಾಯ್ಕ ತಿಳಿಸಿದ್ದಾರೆ.