Home Local ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ, ದೊರೆಯುತ್ತದೆ: ನಾಗರಾಜ ನಾಯಕ ತೊರ್ಕೆ

ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ, ದೊರೆಯುತ್ತದೆ: ನಾಗರಾಜ ನಾಯಕ ತೊರ್ಕೆ

SHARE

ಹೊನ್ನಾವರ : ತಾಲೂಕಿನ ಕವಲಕ್ಕಿಯ ಜನತಾ ಕಾಲೋನಿಯ ಮಂದಾರ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘ ಇವರ ಆಶ್ರಯದಲ್ಲಿ ದಿನಾಂಕ 28-02-18 ರಂದು ಕವಲಕ್ಕಿಯ ಅಯ್ಯಪ್ಪ ಸ್ವಾಮಿಯ ಸನ್ನಿಧಾನದ ಹತ್ತಿರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿ ಹಾಗೂ ಡ್ಯಾನ್ಸ ಧಮಾಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಎಸ್. ಆರ್. ಎಲ್. ಸಮೂಹ ಸಂಸ್ಥೆಯ ಮಾಲಿಕರಾದ ವೆಂಕಟ್ರಮಣ ಹೆಗಡೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂತಹ ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾ ಕಾರ್ಯಕ್ರಮಗಳೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕ್ರೀಡಾಪಟುಗಳಿಗೆ ಹಾಗೂ ನೃತ್ಯಪಟುಗಳಿಗೆ ಉತ್ತಮವಾದ ವೇದಿಕೆಯನ್ನು ಒದಗಿಸಲಾಗಿದ್ದು ಅಭಿನಂದನಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಲಿ. ಇದಕ್ಕೆ ತಾವು ನಿರಂತರವಾಗಿ ಸಹಕರಿಸುವುದಾಗಿ ನುಡಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಮಂದಾರ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘವು ಅತ್ಯಂತ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿದ್ದು ಇವೆರಡೂ ಮನುಷ್ಯನ ಜೀವನಕ್ಕೆ ಅತ್ಯಗತ್ಯವಾಗಿದೆ. ಯಾಂತ್ರಿಕ ಬದುಕಿನಿಂದಾಗಿ ನಮ್ಮ ಜೀವನ ಒತ್ತಡಮಯವಾಗಿದೆ. ಇಂತಹ ಸಾಂಸ್ಕøತಿಕ ಕಾರ್ಯಕ್ರಮಗಳು ಮನಸ್ಸಿಗೆ ಮುದನೀಡುತ್ತವೆ. ಆರೋಗ್ಯ ಭಾಗ್ಯದ ಮುಂದೆ ಎಲ್ಲಾ ಭಾಗ್ಯಗಳು ನಗಣ್ಯವಾದದ್ದು. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಿದಾಗ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆಯುವುದರೊಂದಿಗೆ ಅವರ ಪ್ರತಿಭೆ ಬೆಳಕಿಗೆ ಬಂದು ಪ್ರೋತ್ಸಾಹ ದೊರೆಯುತ್ತದೆ ಎಂದರು.

ಯುವ ಮುಖಂಡರಾದ ರವಿಕುಮಾರ ಶೆಟ್ಟಿ ಅವರು ಕ್ರೀಡಾಂಗಣವನ್ನು ಉದ್ಘಾಟಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ತಂಡಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಗ್ವಾ ಗ್ರಾಮ ಪಂಚಾಯತದ ಅಧ್ಯಕ್ಷರಾದ ಟಿ. ಎಸ್. ಹೆಗಡೆ ಕೊಂಡಕೆರೆ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಹೊಸಾಕುಳಿ ಗ್ರಾ. ಪಂ. ಅಧ್ಯಕ್ಷರಾದ ಸುರೇಶ ಜಿ. ಶೆಟ್ಟಿ, ಮುಗ್ವಾ ಗ್ರಾ. ಪಂ. ಸದಸ್ಯ ಆಯ್. ವಿ. ನಾಯ್ಕ, ಮುಗ್ವಾ ಗ್ರಾ. ಪಂ. ಸದಸ್ಯ ಕೆ. ಎಸ್. ಗೌಡ, ಮುಗ್ವಾ ಗ್ರಾ. ಪಂ. ಸದಸ್ಯೆ ಮೀರಾ ಪಿ. ನಾಯ್ಕ, ಉದ್ಯಮಿ ಎಸ್. ಕೆ. ಶೆಟ್ಟಿ, ಹಳದಿಪುರ ಗ್ರಾ. ಪಂ. ಸದಸ್ಯ ವಿನಾಯಕ ಶೇಟ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.