Home Local ಸಂಗೀತವು ಮನಸ್ಸಿನಲ್ಲಿ ಶಾಂತತೆಯನ್ನು, ಸೌಹಾರ್ದತೆಯನ್ನು, ಸಂಸ್ಕøತಿಯನ್ನೂ ಸಾರುತ್ತವೆ.- ನಾಗರಾಜ ನಾಯಕ ತೊರ್ಕೆ

ಸಂಗೀತವು ಮನಸ್ಸಿನಲ್ಲಿ ಶಾಂತತೆಯನ್ನು, ಸೌಹಾರ್ದತೆಯನ್ನು, ಸಂಸ್ಕøತಿಯನ್ನೂ ಸಾರುತ್ತವೆ.- ನಾಗರಾಜ ನಾಯಕ ತೊರ್ಕೆ

SHARE

ಹೊನ್ನಾವರ:ತಾಲೂಕಿನ ಕವಲಕ್ಕಿಯ ನಾದರಂಗ ಸಾಂಸ್ಕøತಿಕ ವೇದಿಕೆ ಇವರ ಆಶ್ರಯದಲ್ಲಿ ಸಂಗೀತ ತರಗತಿಯ ಪ್ರಾರಂಭೋತ್ಸವವನ್ನು ಹೊನ್ನಾವರದ ಶರಾವತಿ ವೃತ್ತದ ಹತ್ತಿರ ಶ್ರೀ ಸತ್ಯಸಾಯಿ ದರ್ಶನ ಕಾಂಪ್ಲೆಕ್ಸ್ ಮೊದಲನೇ ಮಹಡಿ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಎಸ್.ಆರ್.ಎಲ್. ಟ್ರಾವೆಲ್ಸ್ ನ ಮಾಲಿಕರು, ಬಿಜೆಪಿ ಪ್ರಮುಖರೂ ಆಗಿರುವ ವೆಂಕಟ್ರಮಣ ಹೆಗಡೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತಮ್ಮ ಗುರುಗಳಾದ ಜಿ. ಆರ್. ಭಟ್ ಅವರು ಪ್ರಾರಂಭಿಸಿದ ಈ ನಾದರಂಗ ವೇದಿಕೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾ ಈ ಅಮೂಲ್ಯವಾದ ವೇದಿಕೆಗೆ ತಮ್ಮ ಸೇವೆ ನಿರಂತರವಾಗಿರಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿ.ಪಂ. ಸದಸ್ಯರಾದ ಶ್ರೀಮತಿ ಶ್ರೀಕಲಾ ಶಾಸ್ತ್ರಿ ಅವರು ಮಾತನಾಡಿ ಜೀವನ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರತಿಯೊಬ್ಬರ ಜೀವನದಲ್ಲಿ ಸಂಗೀತ ನೆಮ್ಮದಿ, ಸಂತೋಷ, ಸಂಸ್ಕøತಿಯನ್ನು ನೀಡುತ್ತದೆ ಎನ್ನುತ್ತ ಗೋವುಗಳು ಸಹ ಸುಮಧುರ ಸಂಗೀತಕ್ಕೆ ತಲೆಬಾಗುತ್ತ ಹೆಚ್ಚಿಗೆ ಹಾಲು ನೀಡುತ್ತವೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ನಾಗರಾಜ ನಾಯಕ ತೊಕೆ9 ಅವರು ಮಾತನಾಡಿ ಸಂಗೀತದ ಬಗ್ಗೆ ತಮಗೆ ಹೆಚ್ಚಿನ ಒಲವಿದೆ. ಸಂಗೀತಕ್ಕೆ ಅಪಾರವಾದ ಶಕ್ತಿಯಿದೆ. ದೀಪಕರಾಗವು ದೀಪವನ್ನು ಉರಿಸಬಲ್ಲದು ಅಷ್ಟೇ ಅಲ್ಲದೆ ಸಂಗೀತವು ಮಳೆಯನ್ನು ಸಹ ತರಿಸಬಲ್ಲದು ಎಂಬ ಬಗ್ಗೆ ಉಲ್ಲೇಖವನ್ನೂ ಕೇಳಿದ್ದೇವೆ. ಸಂಗೀತಕ್ಕೆ ಕೇವಲ ಮನುಷ್ಯರಷ್ಟೇ ಅಲ್ಲದೇ ಪ್ರಾಣ ಪಕ್ಷಿಗಳು, ಮರಗಿಡಗಳು ಕೂಡಾ ಸ್ಪಂದಿಸುತ್ತವೆ ಎನ್ನುವುದನ್ನು ಕೇಳಿ ತಿಳಿದಿದ್ದೇವೆ ಹಾಗೂ ಜನರ ಮನಸ್ಸಿನಲ್ಲಿ ಶಾಂತತೆಯನ್ನು, ಸೌಹಾರ್ದತೆಯನ್ನು, ಸಂಸ್ಕøತಿಯನ್ನೂ ಸಾರುತ್ತವೆ. ಅನೇಕ ಮಾನಸಿಕ ರೋಗಗಳನ್ನು ಗುಣಪಡಿಸಬಲ್ಲ ಶಕ್ತಿ ಸಂಗೀತಕ್ಕಿದೆ. ಇಂತಹ ವಿಶಿಷ್ಟ ಸ್ಥಾನ ಪಡೆದಿರುವ ಸಂಗೀತದ ತರಬೇತಿ ಶಾಖೆಯನ್ನು ಆರಂಭಿಸಿರುವುದು ಸಂತಸದಾಯಕವಾಗಿದೆ. ಹಲವು ವರ್ಷಗಳಿಂದ ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ನಾದರಂಗ ವೇದಿಕೆಯ ನಾಲ್ಕನೇ ಶಾಖೆ ಇದಾಗಿದೆ ಎಂದು ನುಡಿದು ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಂಗೀತ ಶಿಕ್ಷಕರಾದ ಜಿ.ಜಿ.ಹೆಗಡೆ ಕವಲಕ್ಕಿ, ಶ್ರೀಮತಿ ಲಕ್ಷ್ಮಿ ಹೆಗಡೆ ಶಿರಸಿ ಇವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಶುಭ ಕೋರಿದರು.

ಈ ಸಂದಭ9ದಲ್ಲಿ ಶ್ರೀಮತಿ ಲಕ್ಷ್ಮಿ ಹೆಗಡೆ ಹೆಬ್ಬಾರ್ನಕೇರಿ, ಅಶೋಕ ಭಟ್ಟ, ಜಿ.ಜಿ.ಹೆಗಡೆ ಕವಲಕ್ಕಿ, ಗಾಯಕಿ ಶ್ರೀಮತಿ ಕಾವ್ಯಶ್ರೀ ಹೆಗಡೆ ಶಿರಸಿ, ತಬಲ ವಾದಕರಾದ ಶ್ರೀಮತಿ ಸರಸ್ವತಿ ಅಯ್ಯಂಗಾರ್ ಮಂಕಿ, ಕುಮಾರಿ ರಮ್ಯಾ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಸಂಗೀತ ಕಾರ್ಯಕ್ರಮ ಜರುಗಿತು.