Home Important ರಾಜ್ಯದಲ್ಲೂ ಬೀಸುತ್ತಿದೆಯೇ ಈಶಾನ್ಯ ಮಾರುತ?

ರಾಜ್ಯದಲ್ಲೂ ಬೀಸುತ್ತಿದೆಯೇ ಈಶಾನ್ಯ ಮಾರುತ?

SHARE

ಮಂಗಳೂರು: ತ್ರಿಪುರಾ, ಮೇಘಾಲಯ ಸಹಿತ ಪೂವೋತ್ತರ ಭಾರತದ 8ರಲ್ಲಿ 7 ರಾಜ್ಯಗಳನ್ನು ಜನ ಕಾಂಗ್ರೆಸ್​ವುುಕ್ತ ಮಾಡಿದ್ದಾರೆ, ಇದೀಗ ಕರ್ನಾಟಕದ ಜನತೆಯ ಸರದಿ ಬಂದಿದೆ. ವಿಕಾಸದೊಂದಿಗೆ ಜನರ ಸುರಕ್ಷತೆಗಾಗಿ ಕರ್ನಾಟಕವನ್ನೂ ಕಾಂಗ್ರೆಸ್​ವುುಕ್ತ ಮಾಡಬೇಕಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ರಾಜ್ಯ ಸರ್ಕಾರದ ಹಿಂದು ವಿರೋಧಿ ನೀತಿ ಖಂಡಿಸಿ ಬಿಜೆಪಿ ವತಿಯಿಂದ ಕೊಡಗಿನ ಕುಶಾಲನಗರ ಹಾಗೂ ಉತ್ತರ ಕನ್ನಡದ ಅಂಕೋಲದಿಂದ ಮಾರ್ಚ್ 3ರಂದು ಏಕಕಾಲದಲ್ಲಿ ಆರಂಭಗೊಂಡ ‘ಮಂಗಳೂರು ಚಲೋ-ಜನಸುರಕ್ಷಾ ಯಾತ್ರೆ’ ಮಂಗಳವಾರ ನೆಹರು ಮೈದಾನದಲ್ಲಿ ಸಮಾರೋಪಗೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯೋಗಿ ಆದಿತ್ಯನಾಥ್ ರಾಜ್ಯ ಸರ್ಕಾರದ ಹಿಂದು ವಿರೋಧಿ ನೀತಿಯನ್ನು ತರಾಟೆಗೆ ತೆಗೆದುಕೊಂಡರು. ದೇಶದೆಲ್ಲೆಡೆ ಬಿಜೆಪಿಯ ನವೋದಯವನ್ನು ನೋಡಿದ್ದೀರಿ. ಮೊನ್ನೆಯಷ್ಟೇ ಪಕ್ಷ ತ್ರಿಪುರಾದಲ್ಲಿ ಮೂರನೇ ಎರಡರಷ್ಟು ಬಹುಮತ ಗಳಿಸಿದೆ, ನಾಗಾಲ್ಯಾಂಡ್​ನಲ್ಲಿ ಮಿತ್ರಪಕ್ಷದೊಂದಿಗೆ ಸೇರಿ ಸರ್ಕಾರ ಮಾಡುತ್ತಿದೆ. ಮೇಘಾಲಯದಲ್ಲೂ ಕೂಡ ಸಹ ಮಿತ್ರ ಪಕ್ಷದೊಂದಿಗೆ ಸೇರಿ ಸರ್ಕಾರ ಮಾಡುತ್ತಿದೆ. ತ್ರಿಪುರಾದಲ್ಲಿ ಕಾಂಗ್ರೆಸ್ ಗಳಿಕೆ ಶೂನ್ಯ, ನಾಗಾಲ್ಯಾಂಡ್​ನಲ್ಲೂ ಶೂನ್ಯ, ಈಶಾನ್ಯ ಭಾರತ ಕಾಂಗ್ರೆಸ್, ಎಡಪಂಥ ಮುಕ್ತ ಆಗಿದ್ದು, ಕರ್ನಾಟಕವೊಂದೇ ಬಾಕಿ ಇದೆ ಎಂದರು.

ಇಡೀ ದೇಶಕ್ಕೆ ಕಾಂಗ್ರೆಸ್ ಒಂದು ಸಮಸ್ಯೆಯಾಗಿದೆ. ಕರ್ನಾಟಕದಲ್ಲಿ ಜನರಿಗೆ ಸುರಕ್ಷತೆ ಇಲ್ಲದೆ ಸಂಕಟ ಆವರಿಸಿದೆ. ಈ ಭದ್ರತೆಯ ಸವಾಲಿಗೆ ಬಿಜೆಪಿ ಮಾತ್ರ ತಕ್ಕ ಉತ್ತರ ನೀಡಬಲ್ಲದು ಎಂದು ಯೋಗಿ ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 23 ಹಿಂದು ಕಾರ್ಯಕರ್ತರ ಹತ್ಯೆಯಾಗಿದೆ. ಇದಕ್ಕೆ ಕಾರಣರಾದ ಜಿಹಾದಿ, ದೇಶವಿದ್ರೋಹಿ ಶಕ್ತಿಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿದೆ. ಇನ್ನೊಂದೆಡೆ ಪಿಎಫ್​ಐ ಕಾರ್ಯಕರ್ತರ ಮೇಲಿರುವ ಕೇಸ್​ಗಳನ್ನು ಹಿಂಪಡೆಯಲಾಗುತ್ತಿದೆ. ಇದರಿಂದಾಗಿ ಕಾಂಗ್ರೆಸ್ ಕಾ ಹಾಥ್ ಜಿಹಾದೀ ಕೇ ಸಾಥ್ ಎನ್ನುವುದು ಸ್ಪಷ್ಟಗೊಂಡಿದೆ ಎಂದರು. ಮೋದಿ ದೇಶದೆಲ್ಲೆಡೆ ವಿಕಾಸ ಹಾಗೂ ಉತ್ತಮ ಆಡಳಿತದ ಮಂತ್ರ ಜಪಿಸುತ್ತಿದ್ದಾರೆ. ಇದನ್ನು ನೋಡಿದ ಜನರು 22 ರಾಜ್ಯಗಳಲ್ಲಿ ಬಿಜೆಪಿ ಅಥವಾ ಬಿಜೆಪಿ-ಮಿತ್ರಪಕ್ಷಗಳ ಸರ್ಕಾರ ಆರಿಸಿದ್ದಾರೆ. ಅಭಿವೃದ್ಧಿ ಎಲ್ಲರಿಗೂ ಮಹತ್ವದ್ದು, ಜನರ ಜೀವನಮಟ್ಟ ಸುಖಮಯವಾಗಲು, ಭವಿಷ್ಯಕ್ಕೆ ಪ್ರಗತಿ ಬೇಕು. ಸುರಕ್ಷತೆಯೂ ಇದ್ದರೆ ಸುಖಮಯ ಭವಿಷ್ಯ ಸಿಗುತ್ತದೆ. ಕರ್ನಾಟಕ ದಲ್ಲಿ ವಿಕಾಸವಿಲ್ಲ, ಸುರಕ್ಷತೆಗೂ ಸಂಕಟ ಬಂದೊದಗಿದೆ ಎಂದರು.