Home Local ಭಟ್ಕಳದಲ್ಲಿ ಭೀಕರ ಅಪಘಾತ.

ಭಟ್ಕಳದಲ್ಲಿ ಭೀಕರ ಅಪಘಾತ.

SHARE

ಭಟ್ಕಳ: ಇಲ್ಲಿನ ಶಿರಾಲಿ ಬಳಿಯ ಮಾವಿನಕಟ್ಟೆ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ಕಾರಿಗೆ ಪೆಟ್ರೋಲ್‌ ಟ್ಯಾಂಕರ್‌ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕುಂದಾಪುರ ಉಪ್ಪುಂದದ ಮತ್ಸ್ಯೋದ್ಯಮಿ ಅಣ್ಣಪ್ಪ ಖಾರ್ವಿ (33) ಅವರು ದಾರುಣವಾಗಿ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಇತರ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳ ಪೈಕಿ ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಎಂದು ತಿಳಿದು ಬಂದಿದೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರಿನಲ್ಲಿದ್ದ ಪ್ರಭಾಕರ , ನಾಗವೇಣಿ, ಸುಬ್ರಹ್ಮಣ್ಯ ಮತ್ತು ಮುಕುಂದ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಅಪಘಾತದ ತೀವ್ರತೆಗೆ ಕಾರು ಎದುರುಗಡೆಯಿಂದ ನಜ್ಜುಗುಜ್ಜಾಗಿದ್ದು , ಟ್ಯಾಂಕರ್‌ ಪಲ್ಟಿಯಾಗಿದೆ.

ಮುರುಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.