Home Important ಶಿರಸಿಯ ಜೆಡಿಎಸ್ ಕಚೇರಿಯಲ್ಲಿ ಹಲವಾರು ಕಾರ್ಮಿಕ ಮುಖಂಡರು ಜೆಡಿಎಸ್ ಪಕ್ಷವನ್ನು ಸೇರಿದರು.

ಶಿರಸಿಯ ಜೆಡಿಎಸ್ ಕಚೇರಿಯಲ್ಲಿ ಹಲವಾರು ಕಾರ್ಮಿಕ ಮುಖಂಡರು ಜೆಡಿಎಸ್ ಪಕ್ಷವನ್ನು ಸೇರಿದರು.

SHARE

ಶಿರಸಿ : ಜೆಡಿಎಸ್ ರಾಜ್ಯ ಯುವ ರೈತ ದಳದ ರಾಜ್ಯಾಧ್ಯಕ್ಷೆ ಚೈತ್ರ ಗೌಡ ಸಮ್ಮುಖದಲ್ಲಿ ಇತ್ತೀಚೆಗೆ ಶಿರಸಿಯ ಜೆಡಿಎಸ್ ಕಚೇರಿಯಲ್ಲಿ ಹಲವಾರು ಕಾರ್ಮಿಕ ಮುಖಂಡರು ಜೆಡಿಎಸ್ ಪಕ್ಷವನ್ನು ಸೇರಿದರು.

ಈ ಸಂದರಭದಲ್ಲಿ ಮಾತನಾಡಿದ ಚೈತ್ರ ಗೌಡ, ಪಕ್ಷದ ಶಿಷ್ಟಾಚಾರದ ಕುರಿತು ಮಾಹಿತಿ ನೀಡಿ, ಪಕ್ಷದಲ್ಲಿ ಹೇಗೆ ನಡೆದುಕೊಳ್ಳಬೇಕು, ಪ್ರಣಾಳಿಕೆ ಕುರಿತು ಮಾಹಿತಿ ನೀಡಿ, ಜೆಡಿಎಸ್ ಪಕ್ಷದ ಗೆಲುವಿಗೆ ಅವಿರತವಾಗಿ ಶ್ರಮಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ತ್ರಿವೇಣಿ ಗೌಡ, ಜೆಡಿಎಸ್ ಪಕ್ಷಕ್ಕೆ ಯುವ ಜನತೆಯ ಅಗತ್ಯತೆಯಿದೆ, ಯುವಕರ ಸೇರ್ಪಡೆ ಪಕ್ಷಕ್ಕೆ ಇನ್ನಷ್ಟು ಭಲ ತಂದುಕೊಟ್ಟಿದೆ ಎಂದರು.

ತಾಲೂಕ ಅಧ್ಯಕ್ಷ ಸುಭಾಷ ಮಂಡೂರು ಮಾತನಾಡಿ, ಸೇರ್ಪಡೆಗೊಂಡವರು ಬೂತ ಸಮಿತಿಯಲ್ಲಿ ಅವಕಾಶ ನೀಡಲಾಗುವುದೆಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆನಂದ ಗೌಡ್ರು, ಪ್ರಮುಖರಾದ ಇಮ್ರಾನ್ ರಜಾಕ್ ಹರೀಶ ಹೆಗಡೆ ಮುಂತಾದವರಿದ್ದರು.