Home Local ಯಲ್ಲಾಪುರದಲ್ಲಿ ನಡೆದ ಆಜಾದ್ ಟ್ರೋಫಿ.

ಯಲ್ಲಾಪುರದಲ್ಲಿ ನಡೆದ ಆಜಾದ್ ಟ್ರೋಫಿ.

SHARE

ಯಲ್ಲಾಪುರ ; ಪಟ್ಟಣದ ಕಾಳಮ್ಮ ನಗರ ತಾಲೂಕ ಕ್ರೀಡಾಂಗಣದಲ್ಲಿ ಆಜಾದ್ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ತಾಲೂಕ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫೈಟರ್ಸ್ ತಂಡ ಆಜಾದ್ ಕ್ರಿಕೆಟ್ ತಂಡವನ್ನು ಅಂತಿಮ ಪಂದ್ಯದಲ್ಲಿ ಸೋಲಿಸುವುದರ ಮೂಲಕ ಆಜಾದ್ ಟ್ರಾಫಿಯನ್ನು ತನ್ನದಾಗಿಸಿಕೊಂಡಿದೆ.

ಮಾರ್ಚ್ 3ರಿಂದ ಕ್ರಿಕೆಟ್ ಪಂದ್ಯಾವಳಿ ಪ್ರಾರಂಭ ವಾಗಿದ್ದು, ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಆಜಾದ್ ಕ್ರಿಕೆಟ್ ಕ್ಲಬ್ ಹಾಗೂ ಫೈಟರ್ಸ್ ಕ್ರಿಕೆಟ್ ಕ್ಲಬ್ ಮಧ್ಯ ನಡೆದ ರೋಚಕ ಪಂದ್ಯದಲ್ಲಿ, 19.4 ಓವರ್ ನಲ್ಲಿ ಆಜಾದ್ ತಂಡ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು 149 ಬೃಹತ್ ರನ್ ಗಳಿಸಿತ್ತು, ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಫೈಟರ್ಸ್ ಕ್ರಿಕೇಟ್ ಕ್ಲಬ್ ಅಧಿಕವಾದ ಪ್ರದರ್ಶನವನ್ನು ನೀಡಿ ಕೊನೆಯ ಓವರಿನ ಕೊನೆಯ ಎಸೆತದಲ್ಲಿ ರನ್ ಗಳಿಸುವ ಮೂಲಕ ಪಂದ್ಯವನ್ನು ಜಯಿಸಿತು.

ಒಟ್ಟು 14 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಶಾಸಕ ಶಿವರಾಮ ಹೆಬ್ಬಾರ್ ಪ್ರಥಮ ಬಹುಮಾನದ ಪ್ರಾಯೋಜಕತ್ವ ವಹಿಸಿಕೊಂಡಿದ್ದರು, ಇರ್ಷಾದ್ ದ್ವಿತೀಯ ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು.