Home Local “ಕಾಯಕ ಕೇಂದ್ರ” ದ ನೂತನ ಕಟ್ಟಡ ಉದ್ಘಾಟಿಸಿದ‌ ಶಾಸಕಿ ಶಾರದಾ ಮೋಹನ‌ ಶೆಟ್ಟಿ

“ಕಾಯಕ ಕೇಂದ್ರ” ದ ನೂತನ ಕಟ್ಟಡ ಉದ್ಘಾಟಿಸಿದ‌ ಶಾಸಕಿ ಶಾರದಾ ಮೋಹನ‌ ಶೆಟ್ಟಿ

SHARE

ಕುಮಟಾ:ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಗ್ರಾಮ ಪಂಚಾಯತ್ ಬರ್ಗಿ ಇದರ “ಕಾಯಕ ಕೇಂದ್ರ” ಎಂಬ ನೂತನ ಕಟ್ಟಡವನ್ನು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಉದ್ಘಾಟಿಸಿದರು.

ಜನತೆಯ ಅನುಕೂಲಕ್ಕಾಗಿ ಈ ಕಾಯಕ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಸ್ಥಿರ ಹಾಗೂ ಅತೀ ಅಗತ್ಯ ಕಾರ್ಯಗಳಿಗೆ ಅನುಕೂಲವಾಗಲು ಈ ಕೇಂದ್ರಕ್ಕೆ ಕಟ್ಟಡವನ್ನು ನಿರ್ಮಾಣಮಾಡಲಾಗಿದೆ. ಇಂದಿನಿಂದ ಇದು ಜನತೆಯ ಅನುಕೂಲಕ್ಕಾಗಿ ತೆರೆದುಕೊಳ್ಳಲಿದೆ ಎಂದರು.

ಇದೇ ಸಂದರ್ಭದಲ್ಲಿ ಆಶ್ರಯ ಯೋಜನೆ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬರ್ಗಿ ಗ್ರಾ. ಪಂ. ಅಧ್ಯಕ್ಷರಾದ ಶ್ರೀ ರಾಮ ಪಟಗಾರ,ತಾ ಪಂ. ಇ. ಒ. ಕುರಿಯವರ್ ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.