Home Local ಪೇಪರ್ ಮಾರುವ ಹುಡುಗರಿಗೆ ಸೈಕಲ್‌ ವಿತರಿಸಿದ‌‌ ಶಾಸಕ ಮಂಕಾಳ ವೈದ್ಯ.

ಪೇಪರ್ ಮಾರುವ ಹುಡುಗರಿಗೆ ಸೈಕಲ್‌ ವಿತರಿಸಿದ‌‌ ಶಾಸಕ ಮಂಕಾಳ ವೈದ್ಯ.

SHARE

ಭಟ್ಕಳ: ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಮನವಿಯ ಮೇರೆಗೆ ತಾಲೂಕಿನ ಆಯ್ದ ಪತ್ರಿಕಾ ವಿತರಕರಿಗೆ ಮಂಗಳವಾರ ತಾ.ಪಂ.ಆವರಣದಲ್ಲಿ ಶಾಸಕ ಮಾಂಕಾಳ್ ವೈದ್ಯ ತಮ್ಮ ಸ್ವಂತ ಖರ್ಚಿನಲ್ಲಿ ಸೈಕಲ್ ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು ಶಾಲಾ ಮಕ್ಕಳು ಪ್ರತಿನಿತ್ಯ ಮುಂಜಾನೆ ಪೇಪರ ಹಾಕುವ ಹುಡುಗರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಪೇಪರ ವಿತರಿಸಿ ಶಾಲೆಗೆ ಹೋಗಲು ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಸೈಕಲ್ ವಿತರಿಸಲಾಗಿದ್ದು ಒಟ್ಟು 25 ಸೈಕಲ್ ಗಳನ್ನು ವಿತರಿಸಲಾಗಿದೆ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ತಮ್ಮ ಸಂಘದ ಬೆಳ್ಳಿಹಬ್ಬದ ಸಂದರ್ಭದಲ್ಲಿ ಪತ್ರಿಕಾ ವಿತರಣೆ ಮಾಡುವವ ಬವಣೆಯನ್ನು ವಿವರಿಸುತ್ತಿದ್ದಂತೆಯೇ ಸಭೆಯಲ್ಲಿದ್ದ ಶಾಸಕರು ಪತ್ರಿಕಾ ವಿತರಕರಿಗೆ ಸೈಕಲ್ ಕೊಡುವ ಭರವಸೆಯನ್ನು ನೀಡಿದ್ದರು. ಅದರಂತೆ ಸೈಕಲ್ ವಿತರಣೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ತಾ.ಪಂ. ಅಧ್ಯಕ್ಷ ಈಶ್ವರ ನಾಯ್ಕ, ಉಪಾಧ್ಯಕ್ಷೆ ರಾಧಾ ವೈದ್ಯ, ವಿಶ್ವಕರ್ಮ ನಿಗಮದ ಸದಸ್ಯ ಸತೀಶ ಆಚಾರ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ ನಾಯ್ಕ, ಟಿ.ಡಿ. ನಾಯ್ಕ ಸೇರಿದಂತೆ ಜನಪ್ರತಿನಿದಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು