Home Important Dr. ವೈ.ವಿ. ಕೃಷ್ಣಮೂರ್ತಿ ಅವರಿಗೆ ವಿಶೇಷ ಗೌರವ.

Dr. ವೈ.ವಿ. ಕೃಷ್ಣಮೂರ್ತಿ ಅವರಿಗೆ ವಿಶೇಷ ಗೌರವ.

SHARE

ಕರ್ನಾಟಕ ರಾಜ್ಯದ ಪ್ರಧಾನ ಕಾರ್ಯದರ್ಶಿಗಳಾದ Dr. ವೈ.ವಿ. ಕೃಷ್ಣಮೂರ್ತಿ ಅವರಿಗೆ ಗೋ ಸೇವೆಯ ಕುರಿತಾಗಿ  ವಿಶೇಷ ಗೌರವ ಸಂದಿದೆ.

ಸುಬ್ರಮಣಿಯನ್ ಸ್ವಾಮಿಯವರ ‘ವಿರಾಟ್ ಹಿಂದುಸ್ಥಾನ್ ಸಂಗಮ್’ ಸಂಸ್ಥೆ ನೀಡುವ ಪ್ರಶಸ್ತಿ ಇದಾಗಿದ್ದು  ಕೇಂದ್ರ ಗೃಹಖಾತೆ ಮಂತ್ರಿಗಳು ಈ ಪ್ರಶಸ್ತಿ ನೀಡಿದರು.

ಶ್ರೀ ರಾಮಚಂದ್ರಾಪುರ ಮಠದ ಕಾಮದುಘಾ ವಿಭಾಗದ ಕಾರ್ಯದರ್ಶಿಯಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನನ್ಯ ಗೋಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರದ ರಾಜ್ಯ ಖಾತೆಯ ಗೃಹ ಮಂತ್ರಿಗಳಾದ ಹಂಸರಾಜ್ ಅಶೀರ್ ಅವರು ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಇಂದು ನಡೆದ ಕಾರ್ಯಕ್ರಮದಲ್ಲಿ ಈ ಗೌರವ ನೀಡಲಾಯಿತು. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯಂ ಸ್ವಾಮಿ ಹಾಗೂ ಇನ್ನಿತರ ಗಣ್ಯರು ಹಾಜರಿದ್ದರು.