Home Local ಅಂಗನವಾಡಿ ಕೇಂದ್ರ ಉದ್ಘಾಟಿಸಿದ ಶಾಸಕಿ ಶಾರದಾ ಮೋಹನ ಶೆಟ್ಟಿ

ಅಂಗನವಾಡಿ ಕೇಂದ್ರ ಉದ್ಘಾಟಿಸಿದ ಶಾಸಕಿ ಶಾರದಾ ಮೋಹನ ಶೆಟ್ಟಿ

SHARE

ಕುಮಟಾ: ಹಿರೇಗುತ್ತಿ ಪಂಚಾಯತ್ ವ್ಯಾಪ್ತಿಯ ಕೋಳಿಮಂಜಗುಣಿಯಲ್ಲಿ ನೂತನವಾಗಿ ಅಂದಾಜು 9 ಲಕ್ಷ ಅನುದಾನದ ಅಂಗನವಾಡಿ ಕೇಂದ್ರವನ್ನು ನಿರ್ಮಿಸಲಾಗಿದೆ.

ನಿರ್ಮಾಣವಾಗಿರುವ ಈ ನೂತನ ಅಂಗನವಾಡಿ ಕೇಂದ್ರವನ್ನು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಆಶ್ರಯ ಯೋಜನೆ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿದ‌ಸಾಸಕರು ಶಿಕ್ಷಣದ ಪ್ರಾರಂಭದ ಹಂತ ಅಂಗನವಾಡಿ, ಅವುಗಳು ಅಭಿವೃದ್ಧಿಯಾದರೆ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಜಗದೀಶ ಹರಿಕಂತ್ರ, ಶ್ರೀ ಆನಂದು ನಾಯ್ಕ ಹಾಗೂ ಶ್ರೀ ಬೊಮ್ಮಯ್ಯ ಹಳ್ಳೇರ್ ಉಪಸ್ಥಿತರಿದ್ದರು.