Home Local ಯುಗಾದಿ ಸಂಭ್ರಮ: ಎಲ್ಲೆಡೆ ಮೆರವಣಿಗೆ ಹಾಗೂ ವೈವಿಧ್ಯಮಯ ಕಾರ್ಯಕ್ರಮ

ಯುಗಾದಿ ಸಂಭ್ರಮ: ಎಲ್ಲೆಡೆ ಮೆರವಣಿಗೆ ಹಾಗೂ ವೈವಿಧ್ಯಮಯ ಕಾರ್ಯಕ್ರಮ

SHARE

ಉತ್ತರಕನ್ನಡ: ಯುಗಾದಿ ಉತ್ಸವದ ನಿಮಿತ್ತ ಪ್ರತಿ ವರ್ಷದಂತೆ ಹಮ್ಮಿಕೊಳ್ಳಲಾಗಿದ್ದ ಶೋಭಾಯಾತ್ರೆ ಕುಮಟಾ ಹಾಗೂ ಯಲ್ಲಾಪುರದಲ್ಲಿ ರವಿವಾರ ಸಂಜೆ ವಿಜ್ರಂಭಣೆಯಿಂದ ಆರಂಭವಾಯಿತು.

ಕುಮಟಾದಲ್ಲಿ ಆರಂಭವಾದ ಶೋಭಾಯಾತ್ರೆ, ವಾದ್ಯ ಮೇಳ, ಸ್ಥಬ್ದ ಚಿತ್ರಗಳು, ರಾಮಾಯಣ ಮಹಾಭಾರತದ ವೇಷದಾರಿಗಳೊಂದಿಗೆ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಜನ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಕಣ್ಣು ಹಾಯಿಸಿದೆಡೆಯೆಲ್ಲ ಕೇಸರಿ ವಸ್ತ್ರದಾರಿಗಳೆ ಕಾಣ ಸಿಗುತ್ತಿದ್ದು, ಸಂಪೂರ್ಣ ಪಟ್ಟಣ ಕೇಸರಿ ಬಣ್ಣದಿಂದ ಕಂಗೊಳಿಸುತ್ತಿತ್ತು.

ಪ್ರಸ್ತುತ ಯುಗಾದಿ ಉತ್ಸವದಂದು ಪಟ್ಟಣದ ಬೇರೆ ಬೇರೆ ಭಾಗಗಳಿಂದ ಪ್ರತ್ಯೇಕ ಮೆರವಣಿಗೆಯೊಂದಿಗೆ ಟ್ಯಾಬ್ಲೊಗಳನ್ನು ಸಿದ್ದಪಡಿಸಲಾಗಿದ್ದು ಮುಖ್ಯ ಮೆರವಣಿಗೆಗೆ ಹಂತ ಹಂತವಾಗಿ ಜಾನಪದ ಕಲಾಪ್ರಕಾರಗಳ ಸ್ಥಬ್ದ ಚಿತ್ರಗಳು, ಛದ್ಮವೇಷಗಳು ಸೇರ್ಪಡೆಗೊಳ್ಳಲಿವೆ, ಸಂಜೆಯೊಳಗೆ ಮುಖ್ಯ ಶೋಭಾಯಾತ್ರೆಯಲ್ಲಿ ಸೇರಿಕೊಂಡರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಮಾತನಾಡಿ ಭಾರತೀಯರು ಕೈ ಜೋಡಿಸಿ ನಮಸ್ಕಾರ ಮಾಡುವ ವ್ಯವಸ್ಥೆ ಹಾಗೂ ಪರದೇಶದ ಕೈ ಕುಲುಕುವ ವ್ಯವಸ್ಥೆಯ ಬಗ್ಗೆ ಜನರಿಗೆ ತಿಳಿಹೇಳಿದರು. ಕಾಂತೀಯ ವ್ಯವಸ್ಥೆಯನ್ನು ಅನುಸರಿಸಿ ಪಾದ ಮುಟ್ಟಿ ನಮಸ್ಕರಿಸುವ ಬಗೆಗೆ ಜನತೆಗೆ ತಿಳಿಸಿದರು. ಯುಗಾದಿ ಹಾಗೂ ಈ ದಿನದ ಮಹತ್ವವನ್ನು ಅವರು ವಿವರಿಸಿದರು.

ಕುಮಟಾದಲ್ಲಿ ನಡೆದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು ವೇದಿಕೆಯಲ್ಲಿ ಹಿಂದುತ್ವ ಹಾಗೂ ಯುಗಾದಿಯ ವಿಶೇಷಗಳು ಪ್ರತಿಧ್ವನಿಸಿತು. ಮಾತಾ ಪಿತ್ರ ಪೂಜನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜನರನ್ನು ಆಕರ್ಷಿಸಿತು. ನಂತರ‌ನಡೆದ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ‌ ಸಹಸ್ರಾರು ಜನರು ಸಾಕ್ಷಿಯಾದರು.

ಯಲ್ಲಾಪುರದಲ್ಲಿಯೂ ಯುಗಾದಿ ಉತ್ಸವ ಕಳೆಗಟ್ಟಿತ್ತು ಅಂಬೇಡ್ಕರ ನಗರ, ಗಾಂಧಿಚೌಕ್, ಕಾರವಾರ ರಸ್ತೆ ಮೂಲಕ, ಶಿವಾಜಿ ಚೌಕ್, ಬೆಲ್ ರಸ್ತೆ, ನೂತನನಗರ, ಮರಳಿ ಅಂಬೇಡ್ಕರ ವೃತ್ತ, ಬಸವೇಶ್ವರ ವೃತ್ತ, ಗಾಂಧಿಚೌಕ್, ತಿಳಕಚೌಕ್‍ಗಳಲ್ಲಿ ಸಂಚರಿಸಿ ರಾತ್ರಿ ಗ್ರಾಮದೇವಿ ದೇವಸ್ಥಾನದಲ್ಲಿ ಮುಕ್ತಾಯವಾಗಲಿದೆ. ತ ಮುಖ್ಯ ರಸ್ತೆಗಳಲ್ಲಿ ಕಿಕ್ಕಿರಿದ್ದು ಸೇರಿದ್ದ ಹತ್ತಾರು ಸಾವಿರ ಜನ ಭವ್ಯ ಶೋಭಾಯಾತ್ರೆಯನ್ನು ಕಣ್ಣು ತುಂಬಿಕೊಳ್ಳುತ್ತಿದ್ದು, ಗ್ರಾಮೀಣ ಭಾಗವೂ ಸೇರಿದಂತೆ ಬೇರೆ ಬೇರೆ ತಾಲೂಕು, ಗಡಿ ಜಿಲ್ಲೆಗಳಿಂದ ಶೋಭಾಯಾತ್ರೆ ವೀಕ್ಷಿಸಲು ಆಗಮಿಸುತ್ತಿರುವ ಹಿಂದೂ ಭಕ್ತರ ವಾಹನಗಳಿಂದ ಬೆಲ್ ರಸ್ತೆಯಲ್ಲಿ ವಾಹನ ಸಂಚಾರ ನಿಂತು ನಿಂತು ಸಾಗುವಂತಾಗಿದೆ.