Home Important ಶಿಕಾರಿಪುರದಲ್ಲಿ ತೀವ್ರ ಸಂಚಲನ ಮೂಡಿಸಿದ ನರಬಲಿ ಪ್ರಕರಣ.!

ಶಿಕಾರಿಪುರದಲ್ಲಿ ತೀವ್ರ ಸಂಚಲನ ಮೂಡಿಸಿದ ನರಬಲಿ ಪ್ರಕರಣ.!

SHARE

ಶಿವಮೊಗ್ಗ: ಜಿಲ್ಲೆಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ನರಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕಾರಿಪುರ ಗ್ರಾಮಾಂತರ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೇಶಯ್ಯಾ ನಾಯ್ಕ್ ಎಂಬ ವೃದ್ಧರನ್ನು ನಿಧಿಯಾಸೆಗಾಗಿ ಮಾರ್ಚ್ 7ರಂದು ಅಂಜನಾಪುರದಲ್ಲಿ ಹತ್ಯೆಗೈದಿದ್ದರು. ರುಂಡ, ಕೈ, ಕಾಲು ಎಲ್ಲವನ್ನೂ ಬೇರ್ಪಡಿಸಲಾಗಿತ್ತು. ಈ ಪ್ರಕರಣ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿತ್ತು.

ನರಬಲಿ ಕೊಟ್ಟ ಪ್ರಕರಣ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು, ಪ್ರಕರಣದ ಬೆನ್ನತ್ತಿ ತನಿಖೆ ನಡೆಸಿದ್ದ ಪೊಲೀಸರು ರಂಗಪ್ಪ,ಮಂಜುನಾಥ, ಶೇಖರಪ್ಪ ಹಾಗೂ ಗೌಸ್ ಪೀರ್ ಸೇರಿದಂತೆ ನಾಲ್ವರನ್ನು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.