Home Local ವಿದ್ಯುತ್ ವಾಹಕ ಹಾಗೂ ಪರಿವರ್ತಕಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯಕ್ಕೆ ಚಾಲನೆ‌ ನೀಡಿದ ಶಾಸಕಿ‌ ಶಾರದಾ ಶೆಟ್ಟಿ.

ವಿದ್ಯುತ್ ವಾಹಕ ಹಾಗೂ ಪರಿವರ್ತಕಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯಕ್ಕೆ ಚಾಲನೆ‌ ನೀಡಿದ ಶಾಸಕಿ‌ ಶಾರದಾ ಶೆಟ್ಟಿ.

SHARE

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಆಯ್ದ ಚಂದಾವರ, ಮೂರೂರು, ಹಳದಿಪುರ, ಮಿರ್ಜಾನ್ ಮತ್ತು ಗೋಕರ್ಣ ಗ್ರಾಮಗಳಿಗೆ ಆದರ್ಶ ಗ್ರಾಮ ಯೋಜನೆಯಡಿ ವಿದ್ಯುತ್ ವಾಹಕ ಹಾಗೂ ಪರಿವರ್ತಕಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯಕ್ರಮಕ್ಕೆ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಚಾಲನೆ ನೀಡಿದರು.

ನಿರಂತರ‌ ವಿದ್ಯುತ್ ಪೂರೈಕೆ ಹಾಗೂ ಹಳ್ಳಿ ಹಳ್ಳಿಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಈ ಯೋಜನೆ‌ಮಹತ್ವ ಪಡೆದಿದೆ .ಇದರ ಸದುಪಯೋಗ ಜನತೆಗೆ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಗುಣಮಾಲ್ ಇಂದ್ರ ಜೈನ್, ಮುಖಂಡರಾದ ವಿನಾಯಕ ಶೇಟ್ ಮುಂತಾದವರು ಉಪಸ್ಥಿತರಿದ್ದರು.