Home Important ಮಾ. 25ರಿಂದ ಮನ್ನಿಕೇರಿ ಮಹಾಂತಲಿಂಗೇಶ್ವರ ಜಾತ್ರೆ

ಮಾ. 25ರಿಂದ ಮನ್ನಿಕೇರಿ ಮಹಾಂತಲಿಂಗೇಶ್ವರ ಜಾತ್ರೆ

SHARE

ಮೂಡಲಗಿ: ಸಮೀಪದ ಮನ್ನಿಕೇರಿಯ ಶ್ರೀ ಕ್ಷೇತ್ರ ಮಹಾಂತಲಿಂಗೇಶ್ವರರ ಜಾತ್ರೆಯು ಮಾ. 25ರಿಂದ ಮಾ. 29ರ ವರೆಗೆ ಪೀಠಾಧಿಪತಿ ವಿಜಯ ಸಿದ್ಧೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಜರುಗಲಿದೆ.

ಮಾ. 25ರಂದು ಸಂಜೆಗೆ ಶ್ರೀಮಠದ ಬಾಲಕರಿಂದ ಸನ್ನಿಧಿಗೆ ರುದ್ರಾಭೀಷೇಕ, ರಾತ್ರಿ 10ಗಂಟೆಗೆ ವಿವಿಧ ಗ್ರಾಮಗಳಿಂದ ಆಗಮಿಸುವ ಭಕ್ತರಿಂದ ಶಿವಭಜನೆ ಜರುಗುವುದು. ಮಾ. 26ರಂದು ಬೆಳಿಗ್ಗೆ 6ಕ್ಕೆ ಮೂಲ ಸನ್ನಿಧಿಗೆ ವಿಶೇಷ ಪೂಜೆ ಜರುಗುವುದು, ಬೆಳಿಗ್ಗೆ 9.30ಕ್ಕೆ ಕಳಸಾರೋಹಣ ಮತ್ತು ಪಲ್ಲಕ್ಕಿ ಉತ್ಸವ ಜರಗುವುದು. ಸಂಜೆ 5.30ಕ್ಕೆ ಮಹಾಂತಲಿಂಗೇಶ್ವರರ ಭವ್ಯ ರಥೋತ್ಸವವು ಜರುಗುವುದು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭಾಗವಹಿಸುವರು.
ಪ್ರವಚನ: ಮಾ. 25ರಿಂದ ಮಾ. 29ರ ವರೆಗೆ ಪ್ರತಿ ದಿನ ಸಂಜೆ 7.30ರಿಂದ ರಾತ್ರಿ 9ರವರೆಗೆ ಮಧುರಖಂಡಿಯ ಬಸವಜ್ಞಾನ ಗುರುಕುಲದ ಶರಣ ಡಾ. ಈಶ್ವರ ಮಂಟೂರ ಹಾಗೂ ಮುಗಳಿಹಾಳದ ಸೋಮಲಿಂಗ ಶಾಸ್ತ್ರೀಗಳಿಂದ ಪ್ರವಚನ ಜರುಗಲಿದೆ. ಪ್ರತಿದಿನ ಮಹಾಪ್ರಾಸಾದ ಇರುವುದು.
ಅಧಿಕ ಮಾಹಿತಿಗಾಗಿ ಮೊ. 9480455594 ಸಂಪರ್ಕಿಸಲು ಸಮಿತಿಯವರು ತಿಳಿಸಿದ್ದಾರೆ.